– ಕಮಿಷನ್ ಸರ್ಕಾರ ಎಂದ ಮೋದಿಗೆ ಹೆಚ್‍ಡಿಕೆ ಟಾಂಗ್
ಬಳ್ಳಾರಿ: ಬಿಜೆಪಿ ರಾಜಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕೇಂದ್ರ ನಾಯಕರಿಗೆ 1800 ಕೋಟಿ ರೂಪಾಯಿ ಹಣ ನೀಡಿದ್ದಾರೆ ಅನ್ನೋ ಡೈರಿಯನ್ನ ಇತ್ತೀಚಿಗೆ ಕಾಂಗ್ರೆಸ್ ಬಿಡುಗಡೆ ಮಾಡಿ ಬಹುದೊಡ್ಡ ಆರೋಪ ಮಾಡಿತ್ತು. ಆ ಡೈರಿ ನಕಲಿ ಎಂದು ಪ್ರೂವ್ ಕೂಡ ಆಯ್ತು. ಆದ್ರೆ ಇದೀಗ ಸಿಎಂ ಕುಮಾರಸ್ವಾಮಿ ಅವರು ಬಿಎಸ್‍ವೈ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಎಸ್ ವೈ ಕೇಂದ್ರ ಬಿಜೆಪಿ ನಾಯಕರಿಗೆ ಹಣ ರವಾನಿಸಿದ್ದು ನಿಜ. ಆ ದಾಖಲೆಗಳು ಚೆಕ್ ಮೂಲಕ ಪಡೆದ ಹಣದ ಮಾಹಿತಿ ನನ್ನ ಬಳಿಯಿದೆ. ಬಿಎಸ್‍ವೈ ಚೆಕ್ ಮೂಲಕ ಪಡೆದ ಕಮೀಷನ್ ದಾಖಲೆಗಳು ನನ್ನ ಬಳಿಯಿವೆ. ಪ್ರಧಾನಿ ನರೇಂದ್ರ ಮೋದಿಗೆ ದಾಖಲೆಗಳು ಬೇಕಾದ್ರೆ ನಾನು ನೀಡುವೆ ಎಂದು ಸಿಎಂ ಹೇಳಿದ್ದಾರೆ.
Advertisement
Advertisement
ಚಿತ್ರದುರ್ಗದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಸಂದರ್ಭದಲ್ಲಿ, ಭದ್ರಾ ಮೇಲ್ದಂಡೆ ಯೋಜನೆಗೆ 12 ವರ್ಷಗಳ ಹಿಂದೆ ನಾನು ಸಿಎಂ ಆಗಿದ್ದ ವೇಳೆ ಪ್ರಾರಂಭಿಕ ಒಪ್ಪಿಗೆ ನೀಡಿದ್ದೆ. ಆದ್ರೆ 500 ಕೋಟಿ ಯೋಜನೆಯ ಟೆಂಡರನ್ನು 900 ಕೋಟಿಗೆ ದ್ವಿಗುಣಗೊಳಿಸಿ ಗುತ್ತಿಗೆದಾರರಿಂದ ಬಿಎಸ್‍ವೈ ಸಿಎಂ ಆಗಿದ್ದ ವೇಳೆ, ಚೆಕ್ ಮೂಲಕ ಲಂಚ ಪಡೆದಿದ್ದಾರೆ. ಆ ದಾಖಲೆಗಳು ಕೂಡ ನನ್ನ ಬಳಿಯಿವೆ. ನಮ್ಮದು ಕಮಿಷನ್ ಸರ್ಕಾರ ಅನ್ನೋ ಮೋದಿಗೆ ಆ ದಾಖಲೆಗಳನ್ನ ನೀಡಲು ನಾನು ಸಿದ್ಧವೆಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಬಿಜೆಪಿ ನಾಯಕರಿಗೆ ಬಿಎಸ್ ವೈ ಹಣ ರವಾನಿಸಿರುವುದು ನಿಜ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ.