ದರೋಡೆ ಗ್ಯಾಂಗ್ ಜೊತೆ ಕೈಜೋಡಿಸಿ 9 ಲಕ್ಷ ಪಡೆದಿದ್ದ ಪೊಲೀಸ್‌ – ಹೆಡ್ ಕಾನ್ಸ್‌ಟೇಬಲ್ ಸೇರಿ 7 ಮಂದಿ ಅರೆಸ್ಟ್‌

Public TV
2 Min Read
Bellary

ಬಳ್ಳಾರಿ: ಪೋಲಿಸ್ ಹೆಡ್‌ಕಾನ್ಸ್‌ಟೇಬಲ್‌ (Police Constable) ಒಬ್ಬ ಕಳ್ಳರ ಜೊತೆ ಕೈಜೋಡಿಸಿ, ಕದ್ದ ಮಾಲನ್ನೇ ತನ್ನ ಮನೆಗೆ ಸಾಗಿಸಿ ಲಕ್ಷ ಲಕ್ಷ ಲೂಟಿ ಮಾಡಿರುವ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯ (BrucePet Police Station) ಮೆಹಬೂಬ್ ಪಾಷಾ ಕಳ್ಳತನದಲ್ಲಿ ಭಾಗಿಯಾಗಿ ಸದ್ಯ ಬಂಧನಕ್ಕೊಳಗಾದ ಮುಖ್ಯಪೇದೆ. ಇದನ್ನೂ ಓದಿ: ಪೇಜರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಟ್ಟಿಸ್ಟ್‌ – ಘಟನೆ ಹಿಂದೆ ಭಾರತೀಯ ಮೂಲದ ಉದ್ಯಮಿಯ ಕೈವಾಡ ಇರೋದು ನಿಜವೇ?

Bellary 2

ಏನಿದು ಘಟನೆ?
ಇದೇ ಸೆಪ್ಟೆಂಬರ್‌ 12ರಂದು ಬೆಳಗ್ಗಿನ ಜಾವ ಬಳ್ಳಾರಿಯ (Bellary) ರಾಯದುರ್ಗಾ ಬಸ್ ನಿಲ್ದಾಣದ ಕಡೆ ಹೋಗ್ತಿರುವಾಗ ರಘು ಎನ್ನುವ ವ್ಯಕ್ತಿ ಕಣ್ಣಿಗೆ ಕಾರದ ಪುಡಿ ಎರಚಿ 22.99 ಲಕ್ಷ ರೂ. ನಗದು ಮತ್ತು 318 ಗ್ರಾಂ ಬಂಗಾರ ದರೋಡೆ ಮಾಡಲಾಗಿತ್ತು. ತೌಸೀಫ್, ಜಾವೀದ್, ಪೀರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ 7 ಜನರಿಂದ ದರೋಡೆ ನಡೆದಿತ್ತು. ಈ ದರೋಡೆ ಟೀಮ್ ಜೊತೆಗೆ ಸೇರಿ ಹೆಡ್ ಕಾನ್ಸ್‌ಟೇಬಲ್‌ ಮೆಹಬೂಬ್ ಪಾಷಾ ಹಣ ಕೊಳ್ಳೆ ಹೊಡೆದಿದ್ದ. ಈ ದರೋಡೆ ಗ್ಯಾಂಗ್‌ನ ಕಿಂಗ್ ಪಿನ್ ಆರೀಫ್‌ಗೆ ದರೋಡೆ ಮಾಡೋದಕ್ಕೆ ಬೈಕ್ ಕೊಟ್ಟು ಕಳಿಸಿದ್ದೇ ಈ ಹೆಡ್ ಕಾನ್ಸ್‌ಟೇಬಲ್ ಮೆಹಬೂಬ್ ಪಾಷಾ ಎಂದು ಹೇಳಲಾಗಿದೆ.

ಮೆಹಬೂಬ್ ಪಾಷಾ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು. ಆಸೀಫ್ ಈ ಹಿಂದೆ ಹೋಮ್ ಗಾರ್ಡ್ ಆಗಿ ಕೆಲಸದಿಂದ ವಜಾಗೊಂಡಿದ್ದ. ಈತನ ಜೊತೆ ಮೆಹಬೂಬ್ ಪಾಷಾ ನಿಕಟ ಸಂಪರ್ಕ ಹೊಂದಿದ್ದ. ಕಳ್ಳತನದ ಪ್ರಕರಣ ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ಪ್ರಕರಣದ ಅಸಲೀಯತ್ತು ಬಟಾಬಯಲಾಗಿದೆ. ಇದನ್ನೂ ಓದಿ: ಮಹಿಳಾ ಪಿಎಸ್‍ಐ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನ – ಕೊಲೆ ಆರೋಪಿಗೆ ಗುಂಡೇಟು

ದರೋಡೆ ಮಾಡಿದ ಹಣದಲ್ಲಿ ಮೆಹಬೂಬ್ ಪಾಷಾ 9 ಲಕ್ಷ ಹಣ ಪಡೆದಿದ್ದ. ಸದ್ಯ ಮೆಹಬೂಬ್ ಪಾಷನಿಂದ 6.25 ಲಕ್ಷ ರೂ. ವಶಕ್ಕೆ ಪಡೆಯಲಾಗಿದ್ದು, ಬಂಧಿತ ಎಲ್ಲಾ ಆರೋಪಗಳಿಂದ ಒಟ್ಟು 15.91 ಲಕ್ಷ ನಗದು, 116 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕಳ್ಳತನದಲ್ಲಿ ತನ್ನ ಪಾಲಿನ ಬಗ್ಗೆ ಒಪ್ಪಿಕೊಂಡಿರುವ ಆರೋಪಿ ಹೆಡ್ ಕಾನಸ್ಟೇಬಲ್ ಮೆಹಬೂಬ್ ಪಾಷಾ ನನ್ನ ಬಂಧಿಸಿದ ನಂತರ, ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆ ಸಂಬಂಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುನಿರತ್ನ ತಪ್ಪು ಮಾಡಿದ್ರೆ ಕಾನೂನು ಪ್ರಕಾರ ತನಿಖೆಯಾಗಿ ಶಿಕ್ಷೆ ಆಗಲಿ – ನಿಖಿಲ್ 

Share This Article