ಬಳ್ಳಾರಿ: ಸ್ವಂತ ಮಗಳ ಮೇಲೆಯೇ ಕಾಮುಕ ತಂದೆಯೊಬ್ಬ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕರಿಬಸಪ್ಪ ಅತ್ಯಾಚಾರ ಎಸಗಿದ ತಂದೆ. ಕರಿಬಸಪ್ಪ ತನ್ನ 15 ವರ್ಷದ ಮಗಳನ್ನು ಆರು ತಿಂಗಳ ಹಿಂದೆಯೇ ಅತ್ಯಾಚಾರ ಮಾಡಿದ್ದ. ಇದಾದ ಬಳಿಕ ಡಿಸೆಂಬರ್ 26ರಂದು ತೋಟದ ಮನೆಗೆ ಕರೆದೊಯ್ದು ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ಮಗಳನ್ನು ಹುಡುಕಿಕೊಂಡು ತೋಟದ ಮನೆಗೆ ಬಂದ ಕರಿಬಸಪ್ಪನ ಪತ್ನಿಗೆ ಪತಿಯ ನೀಚ ಕೃತ್ಯದ ವಿಷಯ ತಿಳಿದಿದೆ.
ಕರಿಬಸಪ್ಪನ ಅಮಾನವೀಯ ಕೃತ್ಯಕ್ಕೆ ಶಿಕ್ಷೆ ಕೊಡಿಸಲು ಪತ್ನಿಯು ಚಿಗಟೇರಿ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸುತ್ತಿದ್ದಂತೆ ಕರಿಬಸಪ್ಪ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv