ಬ್ರಸೆಲ್ಸ್: ಈಗಾಗಲೇ ಹೇರಲಾಗಿರುವ ಲಾಕ್ ಡೌನ್ ಮುಂದಿನ 8 ವಾರಗಳ ಮುಂದುವರಿಯಲಿದೆ ಎಂದು ಬೆಲ್ಜಿಯಂ ಸರ್ಕಾರ ಹೇಳಿದೆ.
ಬೆಲ್ಜಿಯಂನಲ್ಲಿ 3,401 ಮಂದಿಗೆ ಕೊರೊನಾ ಬಂದಿದ್ದು 340 ಗುಣಮುಖರಾದರೆ 75 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್ 17 ರಿಂದ ಲಾಕ್‍ಡೌನ್ ಆದೇಶ ಬಂದಿದ್ದು ಮುಂದಿನ ಕನಿಷ್ಟ 8 ವಾರಗಳ ಕಾಲ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ಮ್ಯಾಗ್ಗಿ ಡೆ ಬ್ಲಾಕ್ ತಿಳಿಸಿದ್ದಾರೆ.
Advertisement
ಈ ಲಾಕ್‍ಡೌನ್ ಎಲ್ಲಿಯವರೆಗೆ ಇರಲಿದೆ ಎಂದು ಪ್ರಶ್ನಿಸಿದ್ದಕ್ಕೆ ಆರೋಗ್ಯ ಸಚಿವರು, ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ಕೊರೊನಾ ಪೀಡಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಟ 8 ವಾರಗಳ ಕಾಲ ಈ ಲಾಕ್‍ಡೌನ್ ಮುಂದುವರಿಯುತ್ತದೆ ಎಂದು
Advertisement
ಮಾರ್ಚ್ 17 ರಿಂದ ಕೇವಲ ಆಹಾರ ಮತ್ತು ಔಷಧಿ ಮಳಿಗೆಗಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು ಕಂಪನಿಗಳು ಬಂದ್ ಆಗಿದೆ. ಖಾಸಗಿ ಕಂಪನಿಗಳ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು ಪೊಲೀಸರು ನಗರದಲ್ಲಿ ಗಸ್ತು ತಿರುಗುತ್ತಿದ್ದಾರೆ.