ಲಕ್ನೋ: ಆಗ್ರಾದ ತಾಜ್ ಮಹಲ್ (Taj Mahal ) ನೋಡಲೆಂದು ರಿಕ್ಷಾ ಹತ್ತಿದ 25 ವರ್ಷದ ಬೆಲ್ಜಿಯಂ ಪ್ರವಾಸಿಗ (Belgian tourist) ಬಳಿ ಆಟೋ ಚಾಲಕ(Auto Driver) ಮತ್ತು ಆತನ ಇಬ್ಬರು ಸಹಚರರು ದರೋಡೆ ಮಾಡಿದ್ದಾರೆ.
Advertisement
ಪ್ರವಾಸಿಗನ ಬಳಿಯಿಂದ 8000 ಯುರೋ ನಗದು, ಒಂದು ಲ್ಯಾಪ್‍ಟಾಪ್ (Laptop), ಒಂದು ಕ್ಯಾಮೆರಾ (Camera), ಒಂದು ಮೊಬೈಲ್ ಫೋನ್ (Mobile Phone) ಮತ್ತು ಒಂದು ಜೊತೆ ಶೂಗಳನ್ನು (Shoes) ಲಪಟಾಯಿಸಿದ್ದಾರೆ. ಇದೀಗ ಮೂವರು ಆರೋಪಿಗಳ ವಿರುದ್ಧ ಆಗ್ರಾದ ಪ್ರವಾಸೋದ್ಯಮ ಪೊಲೀಸ್ ಠಾಣೆಯಲ್ಲಿ (Tourism Police Station) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ
Advertisement
Advertisement
ಪ್ರವಾಸಿಗನನ್ನು ಸೇವಿ ಎಂದು ಗುರುತಿಸಲಾಗಿದ್ದು, ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದ (Agra Cantt Railway Station) ಬಳಿಯ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋ ಚಾಲಕ ಮತ್ತು ಆತನ ಇಬ್ಬರು ಸಹಚರರು (Two Associates) ತನ್ನ ಬಳಿ ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಸೇವಿ ಉಲ್ಲೇಖಿಸಿರುವುದಾಗಿ ಪ್ರವಾಸೋದ್ಯಮ ಪೊಲೀಸ್ ಠಾಣೆಯ ಉಸ್ತುವಾರಿ ಜೈ ಸಿಂಗ್ ಪರಿಹಾರ್ (Jai Singh Parihar) ತಿಳಿಸಿದ್ದು, ಇದೀಗ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
Advertisement
ಪ್ರವಾಸಿಗ ಗೋವಾ(Goa) ಮೂಲದವರಾಗಿದ್ದು, ಬೆಲ್ಜಿಯಂನಲ್ಲಿ (Belgium) ಕೆಲಸ ಮಾಡುತ್ತಿದ್ದಾರೆ. ನಾನು ಭಾರತದ ನಿವಾಸಿ ಮತ್ತು ಗೋವಾದಲ್ಲಿ ಹುಟ್ಟಿದ್ದೇನೆ. ಆಗ್ರಾ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಅವರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ಅವರು ಇಷ್ಟೊಂದು ಸಹಾಯ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಾನು ಬೆಳಗ್ಗೆಯಿಂದ ಹಸಿದಿದ್ದೇನೆ ಮತ್ತು ಅವರು ನನಗೆ ಊಟ ಮತ್ತು ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟರು. ಅವರು ನನ್ನನ್ನು ಅತಿಥಿಯಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸೇವಿ ಹೇಳಿದ್ದಾರೆ.