ಬೆಳಗಾವಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ನೀನಾ-ನಾನಾ ಅನ್ನೋ ಫೈಟ್ ಕೊನೆಗೊಳಿಸುವ ಸಲುವಾಗಿ ಲಿಂಗಾಯತ ಮುಖಂಡರು ಸಭೆ ಕರೆದಿದ್ದಾರೆ.
ಬೆಳಗಾವಿಯ ಫಾರ್ಮ್ ಹೌಸ್‍ನಲ್ಲಿ ಆಯೋಜಿಸಿರುವ ಸಭೆಯಲ್ಲಿ ಸಚಿವರು, ಶಾಸಕರು ಹಾಗು ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. ಪ್ರತ್ಯೇಕ ಧರ್ಮ ಕುರಿತು ಅಧಿವೇಶನದ ವೇಳೆ ಮುಖ್ಯಮಂತ್ರಿಗಳ ಒತ್ತಡವೇರುವ ತಂತ್ರಗಾರಿಕೆ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ. ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಸಭೆ ನಡೆಯುತ್ತದೆ ಎಂದು ತಿಳಿದುಬಂದಿದೆ.
Advertisement
Advertisement
ಅಲ್ಲದೇ ವೀರಶೈವ ಮುಖಂಡರ ಜೊತೆ ಪದೇ ಪದೇ ಚರ್ಚೆ ಮಾಡೋದು ಬೇಡ. ಇದಕ್ಕೆ ಬದಲಾಗಿ ಅವರು ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಮನವಿ ನೀಡಲಿ. ನಾವು ಕೂಡ ಮನವಿ ನೀಡೋಣ. ಅಂತಿಮ ತೀರ್ಮಾನದ ವಿಚಾರವನ್ನು ಸರ್ಕಾರಕ್ಕೆ ಬಿಡೋಣ ಅನ್ನೋದು ಲಿಂಗಾಯತ ಮುಖಂಡರ ಅಭಿಪ್ರಾಯವಾಗಿದೆ. ಅಷ್ಟೇ ಅಲ್ಲದೇ ಈಗಾಗಲೇ ಕೊಟ್ಟಿರುವ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಅಂತಾ ಮುಖಂಡರು ಆಗ್ರಹಿಸಲಿದ್ದಾರೆ ಎನ್ನಲಾಗಿದೆ.