ಬೆಂಗಳೂರು: ಬೆಳಗಾವಿ ಅಧಿವೇಶನ (Belagavi Session) ಹಿನ್ನೆಲೆ ಡಿಸೆಂಬರ್ 9ರ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP Meeting) ಕರೆಯಲಾಗಿದೆ.
ಮಂಗಳವಾರ ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಸಂಜೆ 7ಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಸಿಎಲ್‌ಪಿ ಸಭೆ ನಡೆಯಲಿದೆ. ಈಗಾಗಲೇ ಬಣ ರಾಜಕೀಯದಿಂದ ಗೊಂದಲಕ್ಕೆ ಒಳಗಗಾಗಿರುವ ಕಾಂಗ್ರೆಸ್ ಶಾಸಕರು ಸಹಜವಾಗಿಯೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಚ್ಚಿನ ಮಾಹಿತಿ ಪಡೆಯುವ ಲೆಕ್ಕಾಚಾರದಲ್ಲಿ ಇದ್ದಂತಿದೆ. ಇದನ್ನೂ ಓದಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದ್ರೂ ತಪ್ಪದ ರೈತರ ಸಂಕಷ್ಟ – 25 ಹೇಳಿದ್ರೂ 20 ಕ್ವಿಂಟಾಲ್ ಮಾತ್ರ ಖರೀದಿ!
ಪವರ್ ಶೇರಿಂಗ್ ವಿಚಾರದಲ್ಲಿ ಈ ಗೊಂದಲ ಆರಂಭವಾದ ನಂತರ ನಡೆಯುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದೆ. ಬೆಳಗಾವಿ ಅಧಿವೇಶನ ಹಿನ್ನೆಲೆ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಇದೇ ಸಂದರ್ಭದಲ್ಲಿ ಪವರ್ ಶೇರಿಂಗ್ ಗೊಂದಲದ ಬಗ್ಗೆಯೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪವರ್ ಫೈಟ್ ಬ್ರೇಕ್ ಫಾಸ್ಟ್ ಪ್ಯಾಚಪ್ ನಂತರ ನಡೆಯುತ್ತಿರುವ ಮೊದಲ ಶಾಸಕಾಂಗ ಪಕ್ಷದ ಸಭೆ ಇದಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸಿಎಂ, ಡಿಸಿಎಂ ಬಳಿ ವಾಚ್ ಲೆಕ್ಕ ಕೇಳಿದ ಬಿಜೆಪಿ – ಡಿಕೆಶಿ ಚುನಾವಣಾ ಅಫಿಡವಿಟ್ ಪ್ರದರ್ಶಿಸಿ ಬಿಜೆಪಿ ಟೀಕೆ

