ಬೆಳಗಾವಿ: ಪ್ರೇಯಸಿ (Lover) ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಸ್ನೇಹಿತನನ್ನು ಆಕೆಯ ಮುಂದೆಯೇ ವಿವಸ್ತ್ರಗೊಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಚಿಕ್ಕೋಡಿ (Chikkodi) ಪಟ್ಟಣದ ನಿವಾಸಿ ಪ್ರದೀಪ್ ನಾಯಕ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಬೆಳಗಾವಿ ಜಿಲ್ಲೆಯ ಗೋಕಾಕ್ (Gokak) ತಾಲೂಕಿನ ಘಟಪ್ರಭಾದಲ್ಲಿ ಅ.22ರಂದು ನಡೆ ಮಹೇಶವಾಡಿ ಗ್ರಾಮದ ತುಕಾರಾಮ್ ಶಿಂಘೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಇದಿಗ ಎರಡು ತಿಂಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ಮೃತ ಯುವಕನ ಗುರುತು ಸಿಗದಿದ್ದಾಗ ಫಿಂಗರ್ ಪ್ರಿಂಟ್ ಪಡೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಮೃತದೇಹದ ಕೈಯಲ್ಲಿದ್ದ ಟ್ಯಾಟೋ ಮತ್ತು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಪೊಲೀಸರು ಗುರುತು ಪತ್ತೆ ಹಚ್ಚಿದ್ದರು. ತುಕಾರಾಮ್ ರೈಲು ನಿಲ್ದಾಣದಲ್ಲಿ ಬಾಟಲ್ ಆರಿಸುವ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಿರಿಯೂರು ಬಸ್ ಅಪಘಾತ – ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ
ಕೊಲೆಗೂ ಮುನ್ನ ತುಕಾರಾಮ್ ಜೊತೆಗೆ ಆರೋಪಿ ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇನ್ನೂ ತುಕಾರಾಮ್ ಕೊಲೆಗೂ ಮುನ್ನ ಸ್ನೇಹಿತ ಆರೀಫ್ ಜೊತೆಗೆ ಬಾರ್‌ನಲ್ಲಿ ಪ್ರದೀಪ್ ಪಾರ್ಟಿ ಮಾಡಿದ್ದ. ಬಂಧನಕ್ಕೊಳಗಾದ ಆರೋಪಿ ಮತ್ತೊಂದು ಕೊಲೆಯಲ್ಲೂ ಭಾಗಿಯಾಗಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪ್ರದೀಪ್, ತುಕಾರಾಮ್ ಹಾಗೂ ಮಹಾರಾಷ್ಟ್ರ ಮೂಲದ ಆರೀಫ್ ಮೂವರು ಸ್ನೇಹಿತರಾಗಿದ್ದರು. ರೈಲು ನಿಲ್ದಾಣಗಳಲ್ಲಿ ಖಾಲಿ ಬಾಟಲ್ ಆಯ್ದು ಮಾರಾಟ ಮಾಡ್ತಿದ್ದ ಮೂವರು, ರೈಲು ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದರು. ತುಕಾರಾಮ್ ಘಟಪ್ರಭಾದಲ್ಲಿ ಕೆಲಸ ಮಾಡ್ತಿದ್ರೆ, ಪ್ರದೀಪ್ ಮಹಾರಾಷ್ಟ್ರದಲ್ಲೂ ಕೆಲಸ ಮಾಡ್ತಿದ್ದ. ಪ್ರದೀಪ್ ಪ್ರೀತಿಸುತ್ತಿದ್ದ ಯುವತಿ ಜೊತೆಗೆ ತುಕಾರಾಮ್ ಅಕ್ರಮ ಸಂಬಂಧ ಬೆಳೆಸಿದ್ದೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.
ಆರೋಪಿ ಪ್ರದೀಪ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದಾಗ, ಪೊಲೀಸರನ್ನು ನೋಡಿ ಚಲಿಸುವ ರೈಲಿನಿಂದ ಹಾರಿ ಎಸ್ಕೇಪ್ ಆಗಲು ಯತ್ನಿಸಿದ್ದ. ಬಳಿಕ ಔಟ್‌ಪೋಸ್ಟ್ ಪೊಲೀಸರ ನೆರವು ಪಡೆದು ಪ್ರದೀಪ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯ ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. 2022ರಲ್ಲಿ ಹುಬ್ಬಳ್ಳಿಯ ಬುಲ್ಲಿ ಮಹಾದೇವ ಕೊಲೆಯನ್ನೂ ತಾನೇ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬುಲ್ಲಿ ಮಹಾದೇವ ಕೊಲೆಯ ತನಿಖೆ ನಡೆಸಿದ್ದ ಪೊಲೀಸರು ಸುಳಿವು ಸಿಗದಿದ್ದಾಗ ಕೇಸ್ ಕ್ಲೋಸ್ ಮಾಡಿದ್ದರು. ಇದನ್ನೂ ಓದಿ: ಹಿರಿಯೂರು | ಖಾಸಗಿ ಬಸ್ ದುರಂತ – ಏನಾಗಿದೆ ಅಂತಾನೇ ಗೊತ್ತಾಗಲಿಲ್ಲ: ಶಾಕ್‌ನಲ್ಲೇ ವಿವರಿಸಿದ ಕ್ಲೀನರ್

