– ರಮೇಶ್‍ನನ್ನು ಸಿಎಂ ಅಲ್ಲ ಪಿಎಂ ಮಾಡಿದ್ರೂ ಬರಲ್ಲ
ಬೆಳಗಾವಿ: ನಾವು ರಿವರ್ಸ್ ಆಪರೇಷನ್ ಮಾಡಬೇಕೆಂದು ಏನಿಲ್ಲ. ನಮ್ಮವರು ವಾಪಸ್ ಬಂದರೂ ಸರ್ಕಾರ ಉಳಿಯುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾಲ್ಕು ಜನ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ. ಮುಂಬೈನಲ್ಲಿರುವ ಇಬ್ಬರು ಶಾಸಕರು ಬಂದರೆ ಸರ್ಕಾರ ಉಳಿಯುತ್ತದೆ. ಸರ್ಕಾರ ಉಳಿಸಿಕೊಳ್ಳುವ ಕೆಲಸ ಎಲ್ಲರೂ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಮೈತ್ರಿ ಸರ್ಕಾರದಿಂದಲೂ ತಪ್ಪಾಗಿರಬಹುದು. ಈಗ ಅದನ್ನು ಸರಿಪಡಿಸಿಕೊಳ್ಳಲಾಗುತ್ತದೆ. ಬಿಜೆಪಿ ಪದೇ ಪದೇ ಸರ್ಕಾರ ಬೀಳಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಬಿಜೆಪಿ ಪಕ್ಷ ಅಧಿಕಾರ ತರಲು ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ. ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ. ಬೇರೆಯವರನ್ನು ಸಚಿವರನ್ನಾಗಿ ಮಾಡಿದರೂ, ಇಲ್ಲ ನಮ್ಮನ್ನ ಮುಂದುವರಿಸಿದರೂ ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
Advertisement
ಮುಂಬೈನಿಂದ ಒಬ್ಬ ಶಾಸಕರನ್ನು ಕರೆದುಕೊಂಡು ಹೋಗಿ ಬರಲು ಫ್ಲೈಟ್ ಗೆ 10 ಲಕ್ಷ ಖರ್ಚಾಗುತ್ತದೆ. ಅಲ್ಲಿ ಹೋಟೆಲ್ ಬುಕ್ಕಿಂಗ್ ಸೇರಿದಂತೆ ಎಲ್ಲವನ್ನೂ ಬಿಜೆಪಿ ನೋಡಿಕೊಳ್ಳುತ್ತಿದೆ. ಅತೃಪ್ತರ ಮೇಲೆ ಸ್ಪೀಕರ್ ಅವರು ಸದ್ಯಕ್ಕೆ ಕ್ರಮ ತೆಗೆದುಕೊಳ್ಳುವುದಿಲ್ಲ. ಅತೃಪ್ತ ಶಾಸಕರಿಗೆ ಇನ್ನೂ ಕಾಲಾವಕಾಶ ಇದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಅಲ್ಲ ಪ್ರಧಾನ ಮಂತ್ರಿ ಮಾಡಿದರೂ ಬರುವುದಿಲ್ಲ. ಸಮ್ಮಿಶ್ರ ಸರ್ಕಾರ ಬೀಳುವುದಿಲ್ಲ, ಅದನ್ನು ನಾವು ಉಳಿಸಿಕೊಳ್ಳುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಆರಂಭವಾಗಿದ್ದೇ ಬೆಳಗಾವಿಯಿಂದ. ಉಪಚುನಾವಣೆಗೆ ಗೋಕಾಕ್‍ನಿಂದ ನಾನು ನಿಲ್ಲುವುದಿಲ್ಲ. ಈಗಾಗಲೇ ಲಖನ್ ಜಾರಕಿಹೊಳಿ ಅಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟಿದ್ದಾರೆ. ಅವರು ಯಾರನ್ನೇ ನಿಲ್ಲಿಸಿದರೂ ಲಖನ್ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಗಳು ಸಮ್ಮಿಶ್ರ ಸರ್ಕಾರದ ಎರಡು ಕಣ್ಣು. ಬೆಳಗಾವಿಯಿಂದ ರಮೇಶ್ ಮತ್ತು ಮಹೇಶ್ ಬಿಟ್ಟು ಬೇರೆ ಶಾಸಕರು ರಾಜೀನಾಮೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಕಳೆದುಕೊಂಡಿರುವ ವಸ್ತು ಇನ್ನೂ ಸಿಕ್ಕಿಲ್ಲ. ಆ ವಸ್ತು ಸಿಕ್ಕಿಲ್ಲ ಅಂತಾನೆ ಇನ್ನೂ ಗದ್ದಲ ಹಿಡಿದಿರುವುದು ಅದೂ ಸಿಗುತ್ತೋ ಇಲ್ಲವೋ ಕಾದುನೋಡಬೇಕಿದೆ ಅಣ್ಣ-ತಮ್ಮಂದಿರು ಅನ್ನೋದಕ್ಕಿಂತ ನಮಗೆ ಪಕ್ಷ ಮುಖ್ಯ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಸಹೋದರರ ನಡುವೆ ಫೈಟ್ ಖಚಿತ. ಗೋಕಾಕ್‍ನಲ್ಲಿ ನಮ್ಮ ಪಕ್ಷದಿಂದ ನಾವು ಹೋರಾಟ ಮಾಡುತ್ತೇವೆ ಪಕ್ಷ ಸಂಘಟಿಸುತ್ತೇವೆ. ರಮೇಶ್ ಪತ್ನಿ ಅಥವಾ ಅಳಿಯ ಅಂಬಿರಾವ್ ನಿಂತರೂ ಲಖನ್ ಗೋಕಾಕ್‍ನಲ್ಲಿ ಸ್ಪರ್ಧಿಸುವುದು ಖಚಿತ. ರಮೇಶ್ ಮೂರು ಜನ ಅಳಿಯಂದಿರಿಗಾಗಿ ರಾಜೀನಾಮೆ ಕೊಟ್ಟಿದ್ದು ನಿಜ ಎಂದು ಹೇಳಿದರು.