Connect with us

BELAKU

ಅಜ್ಜಿಗೆ ಇಳಿ ವಯಸ್ಸಾದ್ರೂ ಹಾಡುಗಾರಿಕೆಯಲ್ಲಿ ಹದಿಹರೆಯ-6 ದಶಕಗಳು ರಂಜಿಸಿದ ಕಲಾವಿದೆಗೆ ಬೇಕಿದೆ ಸಹಾಯ

Published

on

ಕಲಬುರಗಿ: ನಮ್ಮ ಗ್ರಾಮೀಣ ಭಾಗದಲ್ಲಿ ಮೌಖಿಕ ಬುರ್ರಾ ಕಥೆ ಜಾನಪದ ಕಲೆ ಇದೀಗ ನಶಿಸಿ ಹೋಗುತ್ತಿದೆ. ಇಂತಹದರಲ್ಲಿ ಕಲಬುರಗಿಯ ವೃದ್ಧ ದಂಪತಿ ಇಂದಿಗೂ ಅದೇ ಕಲೆಯನ್ನು ಜೀವಾಳವಾಗಿ ಮಾಡಿಕೊಂಡಿದ್ದಾರೆ. ದುರಂತ ಅಂದ್ರೆ ಆ ಕಲೆಗೆ ಇದೀಗ ಬೆಲೆಯಿಲ್ಲದ ಕಾರಣ ವೃದ್ಧ ದಂಪತಿ ಸಂಕಷ್ದಲ್ಲಿದ್ದಾರೆ.

ಜಾನಪದ ಕಥೆಗಳನ್ನು ಹಾಡಿನ ರೂಪದಲ್ಲಿ ಹಾಡುವ ಅಜ್ಜಿಯ ಹೆಸರು ಶಂಕ್ರಮ್ಮ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ನಿವಾಸಿಯಾಗಿದ್ದು, ಈ ಇಳಿ ವಯಸ್ಸಿನಲ್ಲಿ ಸಹ ಇವರು ಹರಿಹರೆಯದವರು ನೋಡಿ ನಾಚುವಂತಹ ಎನರ್ಜಿ ಹೊಂದಿದ್ದಾರೆ. ಒಮ್ಮೆ ಕಥೆಗಳನ್ನು ಹೇಳಲು ಆರಂಭಿಸಿದ್ರೆ ಸಾಕು ಗಂಟೆಗಳು ಸಾಲೋದಿಲ್ಲ. ಅಜ್ಜಿ ಅನಕ್ಷರಸ್ಥೆ ಅಲ್ಲದೆ ಎಲ್ಲಿಯೂ ಓದಿ ಕಲಿತಿದಲ್ಲ. ಬದಲಾಗಿ ಆಡು ಮಾತುಗಳನ್ನು ಕಥೆಗಳನ್ನಾಗಿ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಕಥೆ ಹೇಳುತ್ತಾರೆ.

ಅಜ್ಜಿ 10 ವರ್ಷದವಳಿದ್ದಾಗ ಅವರ ತಾಯಿ ಕಥೆಗಳನ್ನ ಹೇಳುತ್ತಾ ಜೀವನ ಸಾಗಿಸುತ್ತಿದ್ದರು. ಅವರ ಜೊತೆ ಹೋಗಿ ಬಾಯಿಂದನೆ ಕಲಿತ ವಿದ್ಯಯಿದು, ಬುರ್ರಾ ಕಥೆಗಳ ಅಂದ್ರೆ ಹಳೆಯ ಕಾಲದ ಇತಿಹಾಸವನ್ನ ಮತ್ತು ದೇವರ ಕಥೆಗಳನ್ನ ಹೇಳುತ್ತಾರೆ. ಇದೇ ರೀತಿ ಹಳ್ಳಿ ಹಳ್ಳಿಗೆ ಹೋಗಿ ತಮ್ಮ ಕುಟುಂಬವನ್ನು ನಿರ್ವಹಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂತಹ ದಂಪತಿಗಿಗೆ ವಯಸ್ಸಾದ ಹಿನ್ನಲೆ ಆ ಶಕ್ತಿ ಉಳಿದಿಲ್ಲ.

ಅಜ್ಜಿ ಶಂಕ್ರಮ್ಮರ ಗಂಡನಾದ ಮಹದೇವಪ್ಪ ಸಾಥ್ ನೀಡಿದ್ದು ಅವರು ಸಹ ಹಗಲುವೇಷ ಮತ್ತು ಹಾರ್ಮೋನಿಯಂ ನುಡಿಸುತ್ತಾರೆ. ಇಂತಹ ಕಲಾವಿದ ದಂಪತಿಗೆ ಇಲ್ಲಿಯವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ನೀಡುವ ಪಿಂಚಣಿ ಸಹ ನೀಡಿಲ್ಲ. ಇನ್ನು ಸ್ವಂತ ಮನೆಯಿಲ್ಲದ ಕಾರಣ ಈ ದಂಪತಿ ಮತ್ತು ಮಗ ಮಾರುತಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ವೃದ್ಯಾಪ ಮಾಶಾಸನ ಪಡೆಯಬೇಕು ಅಂದ್ರೆ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಆಟವಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ನಮ್ಮ ತಂದೆ-ತಾಯಿಯ ನೆರವಿಗೆ ಬರಲಿ ಎಂದು ಮಾರುತಿ ಮಗ ವಿನಂತಿಸುತ್ತಿದ್ದಾರೆ.

ಶಂಕ್ರಮ್ಮ ಅವರ ಬುರ್ರಾ ಕಥೆಗಳ ಕನ್ನಡ ಮತ್ತು ತೆಲುಗು ತವಲಾನಿಕ ಅಧ್ಯಯನ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಣಿಕಪ್ಪ ಎಂಬವರು ಪಿಎಚ್‍ಡಿ ಅವಾರ್ಡ್ ಪಡೆದಿದ್ದಾರೆ. ಇಷ್ಟಾದರೂ ಸರ್ಕಾರ ಮಾತ್ರ ಇವರ ಕಲೆಗೆ ಬೆಲೆ ನೀಡದಿರುವದು ದುರಂತ. ಹೀಗಾಗಿ ಈ ಕಲಾವಿದರು ಸ್ವಂತ ಮನೆ, ವೃದ್ಯಾಪ ಪಿಂಚಣಿ ಮತ್ತು ಕಲಾವಿದರಿಗೆ ಸಿಗಬೇಕಾದ ಮಾಶಾಸನದ ನೀರಿಕ್ಷೆಯಲ್ಲಿದ್ದಾರೆ.

https://www.youtube.com/watch?v=bVErt77iCRs

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *

www.publictv.in