ಯಾದಗಿರಿ: ಕಡು ಬಡತನದಲ್ಲಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ವಾಸವಾಗಿರುವ ಸಂಗಮ್ಮ ಮತ್ತು ಸಾಯಿಬಣ್ಣ ದಂಪತಿಗೆ 7 ಮಕ್ಕಳು. ಏಳೂ ಮಕ್ಕಳು ಹುಟ್ಟುತ್ತಲೇ ವಿಕಲಾಂಗತೆ ಮತ್ತು ಬುದ್ಧಿಮಾಂದ್ಯತೆ. ಈಗಾಗಲೇ ವಿಧಿಯಾಟಕ್ಕೆ ಐದು ಮಕ್ಕಳು ಸಾವನ್ನಪ್ಪಿವೆ.
ಗುನ್ನಮ್ಮ(12) & ಪರಶುರಾಮ್(10) ಇವರಿಬ್ಬರೂ ಮನೆಯಲ್ಲಿ ಜೀವಂತ ಶವದಂತೆ ಬದುಕುತ್ತಿದ್ದಾರೆ. ಮಾತನಾಡಲೂ ಕೂಡ ಬಾರದ ಈ ಮಕ್ಕಳ ಎಲ್ಲಾ ನಿತ್ಯ ಕರ್ಮಗಳು ಹಾಸಿಗೆಯಲ್ಲೇ. ಹಸಿವು, ದಾಹ ಈ ಯಾವುದರ ಪರಿವು ಇಲ್ಲದ ಈ ಮಕ್ಕಳಿಗೆ ತಾಯಿಯೇ ಸರ್ವಸ್ವ. ಹೆತ್ತ ಕಂದಮ್ಮಗಳ ಸ್ಥಿತಿ ಕಂಡು ಈ ತಾಯಿ ಮಮ್ಮಲ ಮರಗುತ್ತಿದ್ದಾರೆ.
Advertisement
Advertisement
ಸಾಯಿಬಣ್ಣಾ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಎರಡು ಮಕ್ಕಳಾದ ಗುನ್ನಮ್ಮ, ಪರಶುರಾಮ್ ಪಾಲನೆ ಪೋಷಣೆಯಲ್ಲಿ ಹೆಂಡತಿಯ ಕಷ್ಟ ನೋಡಲಾರದೆ ಪತ್ನಿ ಜೊತೆ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ತುಂಬಾ ಬಡತನವಿದ್ರೂ, ಸಾಲ ಸೂಲವನ್ನು ಮಾಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಸರಿಪಡಿಸಬೇಕು ಅಂತಾ ಓಡಾಡಿದ್ರು ಪ್ರಯೋಜನವಾಗಿಲ್ಲ. ಬುದ್ಧಿಮಾಂದ್ಯತೆಯಿಂದ ಇರುವ ಮಕ್ಕಳಿಗೆ ಕೆಲವೊಮ್ಮ ಪಿಡ್ಸ್ ಕಾಯಿಲೆ ಕೂಡ ಬರುತ್ತದೆ. ಸದ್ಯ ಸಾಯಿಬಣ್ಣರಿಗೆ ಸ್ವಂತ ಸೂರಿಲ್ಲದ ಕಾರಣ ರಕ್ತ ಸಂಬಂಧಿಗಳ ಮನೆಯಲ್ಲಿ ಆಸರೆ ಪಡೆಯುತ್ತಿದ್ದಾರೆ. ಇದೀಗ ಜೀವನದ ಬಂಡಿ ಸಾಗಿಸಲು ಸಹಾಯ ಮಾಡಿ ಅಂತಾ ಪಬ್ಲಿಕ್ ಟಿವಿಯತ್ತ ಮುಖ ಮಾಡಿದ್ದಾರೆ.
Advertisement
7 ಮಕ್ಕಳು ಬುದ್ಧಿಮಾಂದ್ಯತೆಯಿಂದ ಹುಟ್ಟಿದ್ರು ಧೃತಿಗೆಡದೆ ಉಳಿದ 2 ಮಕ್ಕಳನ್ನು ಕಷ್ಟಪಟ್ಟು ಪೋಷಣೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್. ಕಿತ್ತು ತಿನ್ನುವ ಬಡತನದಲ್ಲಿ ನರಕ ಯಾತನೆ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಸ್ವಾಭಿಮಾನದಿಂದ ಬದುಕಲು ಸರ್ಕಾರದಿಂದ ಅಗತ್ಯ ನೆರವು ಕೊಡಿಸಬೇಕಾಗಿದೆ.
Advertisement
https://www.youtube.com/watch?v=udD-dKG-4yE