ಬೆಳಗಾವಿ: ಈ ವಿದ್ಯಾರ್ಥಿಗೆ ಏನಾದ್ರೂ ಸಾಧನೆ ಮಾಡಬೇಕೆಂಬ ಆಸೆ. ಹೊಸ ಹೊಸ ತಂತ್ರಜ್ಞಾನಗಳು ಗ್ರಾಮದ ಎಲ್ಲ ರೈತರಿಗೂ ಕಡಿಮೆ ಖರ್ಚಿನಲ್ಲಿ ದೊರೆಯಬೇಕೆಂಬುದು ಈ ವಿದ್ಯಾರ್ಥಿ ಕನಸು. ಆದರೆ ಬಡತನದ ಬೇಗೆಗೆ ಸಿಲುಕಿಕೊಂಡಿರುವ ಈ ಯುವಕ ಹೊಸ ಆವಿಷ್ಕಾಕರಗಳಿಗೆ ಹಣ ಇರದ ಕಾರಣ ಕೈ ಚೆಲ್ಲಿ ಕುಳಿತುಕೊಂಡಿದ್ದಾನೆ.
Advertisement
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದ ರಾಜುವಿನ ಸಂಶೋಧನೆಗಳಿಗೆ ಬಡತನ ಅಡ್ಡಿಯಾಗಿದೆ. ಕೈಗಾರಿಕಾ ತರಬೇತಿ ಕೇಂದ್ರ ಐಟಿಐ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ರಾಜು ಸಣ್ಣ ವಯಸ್ಸಿನಲ್ಲಿಯೇ ತಂತ್ರಜ್ಞಾನ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ರಾಜುವಿಗೆ ಹೊಸ ಹೊಸ ಉಪಕರಣಗಳನ್ನು ಆವಿಷ್ಕಾರ ಮಾಡುವ ಆಸೆ. ಈಗ ಕೇವಲ 10 ಸಾವಿರ ಖರ್ಚು ಮಾಡಿ ಬೈಸಿಕಲ್‍ನ್ನೇ ಬೈಕ ಮಾಡಿ ಈ ಯುವಕ ಯಶಸ್ವಿಯಾಗಿದ್ದಾನೆ. ಇನ್ನೂ ಬ್ಯಾಟರಿ ಚಾಲಿತ ಬೈಕ್, ಡೈನೋಮೋ ಚಾಲಿತ ಬೈಕ್ ಸೇರಿದಂತೆ ಬ್ಯಾಟರಿ ಅಳವಡಿತ ರೈತರಿಗೆ ಅನುಕೂಲವಾಗುವಂಥ ಕೃಷಿ ಉಪಕರಣಗಳನ್ನು ತಯಾರಿಸಬೇಕೆಂದ ಆಸೆಯನ್ನು ಹೊಂದಿದ್ದಾನೆ.
Advertisement
Advertisement
ರಕ್ಷಿ ಗ್ರಾಮದಲ್ಲಿ ಸಣ್ಣ ಮನೆಯಲ್ಲಿ ವಾಸವಾಗಿರುವ ಈ ಯುವಕನ ಕುಟುಂಬ ಬಡತನದ ಬೇಗೆಯಲ್ಲಿ ಬೇಯುತ್ತಿದೆ. ತಂದೆ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಕುಟುಂಬ ನಡೆಸಬೇಕು. ಇಷ್ಟೆಲ್ಲ ಬಡತನವಿದ್ದರೂ ಈ ಯುವಕನ ಉತ್ಸಾಹ ಕಡಿಮೆಯಾಗದೇ ಯಾವತ್ತೂ ಹೊಸ ಹೊಸ ಆಲೋಚನೆಗಳಲ್ಲಿ ರಾಜು ತೊಡಗಿಕೊಂಡಿರುತ್ತಾನೆ. ಬಡತನದ ಬೇಗೆಯಲ್ಲಿ ಬಾಡುತ್ತಿರುವ ಇಂಥ ವಿಶೇಷ ಆಸಕ್ತಿ ಹೊಂದಿರುವ ಯುವನಿಗೆ ಪ್ರೋತ್ಸಾಹದ ಅಗತ್ಯವಿದೆ.
Advertisement
ರೈತರ ಬಗೆಗಿನ ಕೃಷಿ ಉಪಕರಣಗಳು ಸೇರಿದಂತೆ ಕಡಿಮೆ ಖರ್ಚಿನಲ್ಲಿ ಈತ ಮಾಡುತ್ತಿರುವ ಆವಿಷ್ಕಾರಗಳು ಯಶಸ್ವಿಯಾಗಿ ಜನರ ಉಪಯೋಗಕ್ಕೆ ಬರುವಂತಾಗಲಿ ಎಂಬುವುದೇ ಪಬ್ಲಿಕ್ ಟಿವಿ ಆಶಯ.
https://www.youtube.com/watch?v=YEll1DdE79k