ಕಲಬುರಗಿ: ನಗರದ ಬಾಲಕರ ಬಾಲ ಮಂದಿರದಲ್ಲಿದ್ದು ಓರ್ವ ವಿದ್ಯಾರ್ಥಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 82ರಷ್ಟು ಅಂಕ ಪಡೆದಿದ್ದಾನೆ. ಆದ್ರೆ ಆ ಬಡ ವಿದ್ಯಾರ್ಥಿಗೆ ಇದೀಗ ಪಿಯುಸಿ ಕಲಿಯಲು ಯಾರೂ ಆಸರೆ ನೀಡದ ಹಿನ್ನಲೆಯಲ್ಲಿ ನೆರವಿನ ನೀರಿಕ್ಷೆಯಲ್ಲಿದ್ದಾನೆ.
ಕಲಬುರಗಿಯ ಕಾಕಡೆ ಚೌಕ್‍ನ ಶರಣಮ್ಮ ಮತ್ತು ಸಿದ್ದಬೀರ್ ದಂಪತಿಯ ಮಗ ನಾಗೇಶ್ ಶಿಕ್ಷಣದ ನೆರವು ಕೋರಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾನೆ. ನಾಗೇಶನ ತಂದೆ ಸಿದ್ದಬೀರ್ ಮದ್ಯಪಾನ ಮಾಡಿ ತನ್ನ ಕುಟುಂಬದ ಜವಾಬ್ದಾರಿಯನ್ನೆ ಮರೆತ್ತಿದ್ದಾನೆ. ಇನ್ನು ನಾಗೇಶನ ತಾಯಿ ಕೂಲಿ ಕೆಲಸ ಮಾಡಿ ತನ್ನ ನಾಲ್ಕು ಮಕ್ಕಳನ್ನು ಸಾಕುತ್ತಿದ್ದಾರೆ. ಅದರಲ್ಲಿ ಕೊನೆಯವನಾದ ನಾಗೇಶ್ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದನ್ನು ಶರಣಮ್ಮ ಅರಿತಿದ್ದಾರೆ.
Advertisement
ತಾಯಿಯ ಆಸೆಯಂತೆ ನಾಗೇಶ್ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಇದೀಗ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 82ರಷ್ಟು ಅಂಕ ಪಡೆದಿದ್ದಾನೆ. ಇಷ್ಟು ಅಂಕ ಪಡೆದ್ರೂ ಸಹ ನಾಗೇಶನಿಗೆ ಯಾವ ಖಾಸಗಿ ಶಾಲೆಯವರು ಉಚಿತ ಪ್ರವೇಶ ಕೊಡುವ ಮನಸ್ಸು ಮಾಡಿಲ್ಲ. ಹೀಗಾಗಿ ಮುಂದಿನ ಭವಿಷ್ಯದ ಕುರಿತು ನಾಗೇಶ್ ಮತ್ತು ಅವನ ಕುಟುಂಬಸ್ಥರು ಚಿಂತೆಯಲ್ಲಿದ್ದಾರೆ.
Advertisement
ಜಾಣನಾಗಿರುವ ನಾಗೇಶನಿಗೆ ಆರ್ಥಿಕ ಸಮಸ್ಯೆಯೇ ಸದ್ಯ ಮಾರಕವಾಗಿದೆ. ಕೂಡಲೇ ಯಾರಾದ್ರು ದಾನಿಗಳು ಮುಂದೆ ಬಂದು ನಾಗೇಶನ ಉಜ್ವಲ ಭವಿಷ್ಯಕ್ಕಾಗಿ ನೆರವು ನೀಡಬೇಕಿದೆ.