ಬೀದರ್: ರಣ ಬಿಸಿಲಿನಲ್ಲಿ ತಲೆ ಮೇಲೆ ಪುಸ್ತಕ ಹಿಡಿದುಕೊಂಡು ಕಾಲೇಜಿಗೆ ಹೋರಟಿರುವ ವಿದ್ಯಾರ್ಥಿಗಳು. ಮೊತ್ತೊಂದು ಕಡೆ ಶಾಲೆಗೆ ಹೋಗಲು ವಿದ್ಯಾರ್ಥಿನಿಯರು ಮೈಲಿಗಟ್ಟಲೆ ಬ್ಯಾಗ್ ಹಾಕಿಕೊಂಡು ಸುಸ್ತಾಗಿ ನಡೆಯುತ್ತಿರುವ ದೃಶ್ಯ. ಸ್ವಾತಂತ್ರ್ಯ ಬಂದಾಗಿನಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲಾ ಅಂದ್ರೆ ನಂಬುತ್ತಿರಾ? ನಂಬಲೇಬೇಕು ಸ್ವಾಮಿ.
ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಸ್ಕಲ್ ಗ್ರಾಮದ ಕಥೆ. 4 ಸಾವಿರಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಬಸ್ಸನ್ನೇ ಕಾಣದೆ ಇರುವುದು ವಿಪರ್ಯಾಸ. ಮಸ್ಕಲ್ ಗ್ರಾಮದಿಂದ ಸಂತಪೂರ್ ಹೋಬಳಿಗೆ ಬರೋಕೆ 5 ಕೀಲೊಮೀಟರ್, ಠಾಣಾಕುಶನೂರ್ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗೋಕೆ ವಿದ್ಯಾರ್ಥಿಗಳು 10 ಕೀಲೋಮೀಟರ್ ನಡೆದುಕೊಂಡೆ ಹೋಗಬೇಕು. 600ಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳ ಪ್ರತಿದಿನದ ಗೋಳು ಇದು. ಈ ಗ್ರಾಮಕ್ಕೆ ಬಸ್ ಸಂಚಾರವಿಲ್ಲದ ಕಾರಣ ಎಷ್ಟೋ ವಿದ್ಯಾರ್ಥಿನಿಯರು ಶಿಕ್ಷಣವನ್ನೇ ತೊರೆದಿರುವುದು ಬೇಸರದ ಸಂಗತಿಯಾಗಿದೆ.
Advertisement
ಬೆಳಗ್ಗೆ ಶಾಲಾ-ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿರುವುದು ಒಂದು ಕಡೆಯಾದ್ರೆ ಸಂಜೆಯಾಗುತ್ತಿದಂತ್ತೆ ಗ್ರಾಮಕ್ಕೆ ಮರಳಲು ವಿದ್ಯಾರ್ಥಿನಿಯರು ಭಯ ಪಡುತ್ತಿದ್ದಾರೆ. ರಾಜ್ಯದಲ್ಲಿ ಇಂದು ನಡೆಯುತ್ತಿರುವ ಅತ್ಯಾಚಾರಗಳು ವಿದ್ಯಾರ್ಥಿನಿಯರ ಭಯಕ್ಕೆ ಮತ್ತೊಂದು ಕಾರಣವಾಗಿದೆ. ಬಸ್ ಇಲ್ಲದಿದ್ರೂ ಈ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಗ್ರಾಮದಿಂದ ವಾಲಿಬಾಲ್ ಕ್ರೀಡೆಗೆ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
Advertisement
ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಇನ್ನೂ ಬಸ್ ವ್ಯವಸ್ಥೆ ಇಲ್ಲದೆ ಇರುವುದು ಜನಪ್ರತಿನಿಧಿಗಳು ತಲೆತಗ್ಗಿಸುವ ವಿಚಾರ. ಇನ್ನು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ತಿಲಾಂಜಲಿ ಇಡುತ್ತಿರುವುದು ಬೇಸರದ ಸಂಗತಿಯಾಗಿದೆ. ಬೆಳಕು ಕಾರ್ಯಕ್ರಮದಿಂದಾದ್ರೂ ನಮ್ಮ ಗ್ರಾಮದ ಮಕ್ಕಳಿಗೆ ಬೆಳಕು ಸಿಗಲಿ ಅಂತಾ ದೂರದ ಬೀದರ್‍ನಿಂದ ಬಂದಿದ್ದಾರೆ.
Advertisement