ಚಿತ್ರದುರ್ಗ: ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಮಗುವಿನ ಪೋಷಕರು ಖುಷಿಯಾಗಿದ್ದರು. ಆದರೆ ಮಗು ನಾಲ್ಕು ತಿಂಗಳು ತುಂಬುವುದರಲ್ಲಿ ಹೊಕ್ಕಳ ಮೇಲೆ ಗಡ್ಡೆ ಕಾಣಿಸಿಕೊಂಡು ಪೋಷಕರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಮೇಟಿಕುರ್ಕಿ ಗ್ರಾಮದ ಮಂಜುನಾಥ್ ಹಾಗೂ ರಂಗಮ್ಮ ಅವರ ಮಗ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೊಕ್ಕಳ ಮೇಲೆ ದಿನೇ ದಿನೇ ದೊಡ್ಡದಾಗುತ್ತಿರೋದ ಗುಳ್ಳೆಯಿಂದ ಮಗು ಪ್ರತಿ ನಿತ್ಯ ನರಕ ಯಾತನೆ ಅನುಭವಿಸುತ್ತಿದೆ. ಮಲ, ಮೂತ್ರ ವಿಸರ್ಜನಾ ಕ್ರಿಯೆಗೆ ಸಾಕಷ್ಟು ಸಂಕಟ ಪಡುತ್ತಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮಂಜುನಾಥ್ ಟ್ರ್ಯಾಕ್ಟರ್ ಚಾಲಕ ಕೆಲಸ ಇದ್ರೆ ಮಾತ್ರ ಜೀವನ ಇಲ್ಲಾ ಅಂದ್ರೆ ಜೀವನ ನಡೆಸೋದು ಕಷ್ಟ. ಮಗನ ಸ್ಥಿತಿಯನ್ನ ಕಂಡು ಯಾರಾದ್ರೂ ಸಹಾಯ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ.
Advertisement
Advertisement
ಶಸ್ತ್ರ ಚಿಕಿತ್ಸೆಗೆ ಬೇಕಿದೆ ಸಹಾಯ: ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೆಳ ಭಾಗದಲ್ಲಿ ಇದೇ ರೀತಿ ಗುಳ್ಳೆಯಾದಾಗ ಆಪರೇಷ್ ಮಾಡಿದ್ರು. ಆ ಸಂದರ್ಭದಲ್ಲೇ ಮಗುವಿಗೆ ಮತ್ತೆ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ಹೇಳಿದ್ರು. ಹೆರಿಗೆಗೆ ಸುಮಾರು 30 ಸಾವಿರ ಹಾಗೂ ಮೊದಲ ಆಪರೇಷನ್‍ಗೆ ಸುಮಾರು 20 ಸಾವಿರ ಹಣ ಖರ್ಚು ಮಾಡಿ ಕುಟುಂಬ ಕಂಗಾಲಾಗಿದೆ. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರ ಬಳಿ ತೋರಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ತಾತ್ಕಾಲಿಕವಾಗಿ ಔಷಧಿ ನೀಡಿದ್ದಾರೆ. ಆದ್ರೆ ಔಷಧಿ ಹಾಕಿದಾಗ ಮಾತ್ರ ಮಗು ಅಳೋದನ್ನ ನಿಲ್ಲಿಸುತ್ತೆ. ಉಳಿದಂತೆ ನೋವಿನಿಂದ ಅಳುತ್ತೆ. ಮಗು ಗುಣ ಮುಖವಾಗಲು ಆರಪೇಷ್ ಮಾಡಿಸಬೇಕು ಎಂದು ಮಕ್ಕಳ ವೈದ್ಯರು ಹೇಳಿದ್ದಾರೆ.
Advertisement
Advertisement
ಮಗು ಗುಣಮುಖವಾಗಲು ಆಪರೇಷ್ ಮಾಡ್ಲೇಬೇಕು. ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಆರಪೇಷನ್‍ಗಾಗಿ 20 ರಿಂದ 30 ಸಾವಿರ ಹಣ ಖರ್ಚಾಗಲಿದೆ. ಯಾರಾದ್ರೂ ಸಹಾಯ ಮಾಡಿದ್ರೆ ಮಂಜುನಾಥ್ ರಂಗಮ್ಮ ದಂಪತಿಯ ಬಾಳಲ್ಲಿ ಬೆಳಕು ಮೂಡಲಿದೆ.