ವಿಜಯಪುರ: ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯನ್ನು ಬೆಳಗಬೇಕಿದ್ದ ಬಾಲಕಿ ಪೋಲೀಯೋದಿಂದ ನರಳುವಂತಾಗಿದೆ. ಇತ್ತ ಶಾಲೆಗೂ ಹೋಗಲು ಆಗದೆ, ಅತ್ತ ಎಲ್ಲರಂತೆ ಆಟವಾಡಲು ಆಗದಂತೆ ಬಾಲಕಿ ನೋವು ಅನುಭವಿಸುತ್ತಿದ್ದಾಳೆ. ಇನ್ನು ಮಗಳ ನೋವು ನೋಡಿಯು ಕೈಯಿಂದ ಏನು ಮಾಡಲು ಆಗದ ಕುಟುಂಬಸ್ಥರು ಪ್ರತಿನಿತ್ಯ ಕಣ್ಣಿರಿನಲ್ಲೆ ಕೈ ತೊಳೆಯುವಂತಾಗಿದೆ.
Advertisement
ಹೌದು. ಲತ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿಕೆ ಗ್ರಾಮದ ಪ್ರಕಾಶ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಅಪೂರ್ವ ಇದೀಗ ಏಳನೇ ತರಗತಿ ಓದುತ್ತಿದ್ದಾಳೆ. ಅಪೂರ್ವ ಹುಟ್ಟಿದಾಗ ಚೆನ್ನಾಗಿಯೇ ಇದ್ದಳಂತೆ. ಆದ್ರೆ ಅಂಗನಾವಾಡಿಗೆ ಹೋಗುವಾಗ ಯಾವುದೋ ಒಂದು ಚುಚ್ಚು ಮದ್ದು ನೀಡಿದ್ದರ ಪರಿಣಾಮ ಆಕೆಯ ಎಡಗಾಲಿನಲ್ಲಿ ಒಂದು ಗಂಟಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಕುಟುಂಬಸ್ಥರು ಸುಮ್ಮನಾಗಿದ್ದಾರೆ. ಆದ್ರೆ ಅಪೂರ್ವ 5 ನೇ ತರಗತಿಗೆ ಬರುವಷ್ಟರಲ್ಲಿ ಎಡಗಾಲಿನ ಗಂಟು ಹೆಚ್ಚಾಗಿ ಒಳಗಡೆಯೇ ಕೊಳೆಯಲು ಆರಂಭವಾಯಿತು. ಇದರಿಂದ ಆಕೆಗೆ ಕುಳಿತಲ್ಲಿಂದ ಏಳಲು, ನಿಂತ್ರೆ ಕೂರಲು ಸಾಧ್ಯವಿಲ್ಲದಂತಾಯಿತು.
Advertisement
ಈ ವೇಳೆ ಕುಟುಂಬಸ್ಥರು ಹಲವೆಡೆ ಚಿಕಿತ್ಸೆ ಕೊಡಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತದನಂತರ ಮೀರಜ್ ನ ಪ್ರತಿಷ್ಠಿತ ವೈದ್ಯ ಜಿ.ಎಸ್.ಕುಲಕರ್ಣಿ ಅವರ ಹತ್ತಿರ ಅಪೂರ್ವಗೆ ಚಿಕಿತ್ಸೆ ಕೊಡಿಸಿ ಒಂದು ಆಪರೇಷನ್ ಮಾಡಿಸಿದ್ದಾರೆ. ಈ ಆಪರೇಷನ್ ಆದ 6 ತಿಂಗಳ ನಂತರ ಮರಳಿ ಬಂದು ಇನ್ನೊಂದು ಆಪರೇಷನ್ ಮಾಡಿಸಿ. ಹೀಗೆ ಮಾಡಿದ್ದಲ್ಲಿ ಮಾತ್ರ ಆಕೆಯ ಕಾಲು ಸರಿ ಹೋಗುತ್ತೆ. ಅಲ್ಲದೇ ನಡೆದಾಡಲು ಬರುತ್ತೆ ಅಂತಾ ಹೇಳಿದ್ದರು. ಆದ್ರೆ ಅಪೂರ್ವಳದ್ದು ಬಡ ಕುಟುಂಬವಾದುದರಿಂದ ಮೊದಲನೇ ಆಪರೇಷನ್ ಆಗಿ 7 ತಿಂಗಳು ಕಳೆದ್ರೂ ಹಣವಿಲ್ಲದ ಕಾರಣ ಮತ್ತೊಮ್ಮೆ ಆಪರೇಷನ್ ಮಾಡಿಸದೆ ಕುಟುಂಬಸ್ಥರು ಸುಮ್ಮನಾಗಿ ಬಿಟ್ಟಿದ್ದಾರೆ.
Advertisement
ಮೊದಲನೆ ಆಪರೇಷನ್ ಗೆ 65 ಸಾವಿರ ಹಣವನ್ನು ಕುಟುಂಬಸ್ಥರು ಹಾಕಿದ್ದು, ಈಗ 2ನೇ ಆಪರೇಷನ್ ಗೆ ಮತ್ತೆ 65 ಸಾವಿರ ಹಣ ಬೇಕಾಗಿದೆ. ಇಷ್ಟೊಂದು ಹಣವಿಲ್ಲದ ಕಾರಣ ಆಪರೇಷನ್ ಮಾಡದೆ ಕುಟುಂಬಸ್ಥರು ಚಿಕಿತ್ಸೆಯ ಹಣಕ್ಕಾಗಿ ಅಲ್ಲಿಲ್ಲಿ ಪರದಾಡುತ್ತಿದ್ದಾರೆ. ಸದ್ಯ ಅಪೂರ್ವ ಕುಟುಂಬ ಸಹಾಯ ಹಸ್ತ ಚಾಚಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.
Advertisement
https://www.youtube.com/watch?v=UxkfpFSgYPo