ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದ ವಿಠ್ಠಲ್ ಹನಮರ್, ತನ್ನ ಸಹೋದರಿಯರಾದ ಶಿಲ್ಪಾ ಹಾಗೂ ಲಕ್ಷ್ಮಿ ಮೂವರು ತಂದೆ ತಾಯಿ ಕಳೆದುಕೊಂಡ ತಬ್ಬಲಿಗಳು. ತಂಗಿಯರ ಓದಿಗಾಗಿ, ಅಣ್ಣ ತನ್ನ ಓದು ಬಿಟ್ಟು ಕೂಲಿ ಮಾಡ್ತಾ ಅವರ ಶಿಕ್ಷಣಕ್ಕೆ ಸಹಾಯ ಮಾಡುತ್ತಿದ್ದರು. ಮೂವರು ಶಾಶ್ವತ ಸೂರಿಲ್ಲದೇ ಅಜ್ಜಿಯ ಮನೆಯಲ್ಲೇ ವಾಸವಾಗಿದ್ದರು. ಹೀಗಾಗಿ ಈ ನೊಂದ ಕುಟುಂಬ ಸಹೋದರಿಯರ ವಿದ್ಯಾಭ್ಯಾಸ ಹಾಗೂ ಸೂರಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.
ಸೂರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದ ಈ ತಬ್ಬಲಿ ಕುಟುಂಬದ ಪರಿಸ್ಥಿತಿಯನ್ನು ಕಂಡಂತಹ ಬೀಳಗಿ ಶಾಸಕ ಜೆ.ಟಿ ಪಾಟೀಲ್, ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ತಬ್ಬಲಿ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಸೂರಿಲ್ಲದೇ ಕಂಗಲಾಗಿದ್ದ ಈ ಬಡ ತಬ್ಬಲಿ ಕುಟುಂಬಕ್ಕೆ ಸ್ವಂತ ಸೂರು ನಿರ್ಮಿಸಿಕೊಳ್ಳಲು ಪಕ್ಕದ ಅಂನಗವಾಡಿ ಪುನರ್‍ವಸತಿ ಕೇಂದ್ರದಲ್ಲಿ 33*33 ಚದರ ಅಡಿ ಜಾಗವನ್ನು ನೀಡಿ, ಮನೆ ನಿರ್ಮಾಣಕ್ಕೆ ಹಾಗೂ ಬಡ ಪ್ರತಿಭಾವಂತ ಯುವತಿಯರ ವಿದ್ಯಾಭ್ಯಾಸದ ಶಿಕ್ಷಣಕ್ಕೆ ತಮ್ಮ ಸಂಸ್ಥೆಯ ಮೂಲಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
Advertisement
ನೊಂದ ಕುಟುಂಬಕ್ಕೆ ನೆರವಾಗಲು ಇಚ್ಛಾಶಕ್ತಿ ತೋರಿದ ಬೀಳಗಿ ಕ್ಷೇತ್ರದ ಶಾಸಕ ಜೆ.ಟಿ ಪಾಟೀಲ್ ಹಾಗೂ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಸೋದರ, ಸೋದರಿಯರು ಧನ್ಯವಾದ ತಿಳಿಸಿದ್ದಾರೆ.
Advertisement
https://youtu.be/Lgbie2WWimY