ದಾವಣಗೆರೆ: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಾ ಮನೆ ಜವಬ್ದಾರಿಯ ಜೊತೆಗೆ ಓದಬೇಕು ಎನ್ನುವ ಆಸೆಯ ಜೊತೆಗೆ ಮನೆಯಲ್ಲಿ ಆಂಗವಿಕಲೆ ಅಕ್ಕನನ್ನು ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಬಾಲಕನ ನೆರವಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬಂದಿದೆ.
ದಾವಣಗೆರೆಯ ತಿಪ್ಪೇಶ್ ಕಳೆದ ಹಲವು ವರ್ಷಗಳಿಂದ ಬಸ್ ನಿಲ್ದಾಣಗಳಲ್ಲಿ ಐಸ್ ಹಾಗೂ ಚಿಪ್ಸ್ ಮಾರಿಕೊಂಡು ಶಾಲೆಯ ಶುಲ್ಕ ಕಟ್ಟಿಕೊಂಡು ಮನೆಯನ್ನು ಸಾಗಿಸುತ್ತ ಜೀವನ ನಡೆಸುತ್ತಿದ್ದ. ಸದ್ಯ ತಿಪ್ಪೇಶ್‍ನಿಗೆ ನಗರದ ಸೋಮೇಶ್ವರ ಶಾಲೆ ಪಬ್ಲಿಕ್ ಟಿವಿಯ ಮನವಿಯ ಮೇರೆಗೆ ಉಚಿತ ಶಿಕ್ಷಣವನ್ನು ನೀಡುತ್ತಿದೆ.
Advertisement
ಸೋಮೇಶ್ವರ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿ ಓದುತ್ತಿರುವ ತಿಪ್ಪೇಶ್ ಶಿಕ್ಷಕರಿಗೆ ಅಚ್ಚುಮೆಚ್ಚು. ಶಿಕ್ಷಕರಿಗೆ ಮಾತು ಕೊಟ್ಟಂತೆ ಹೆಚ್ಚು ಅಂಕ ಪಡೆದು ಶಾಲೆಗೆ ಹಾಗೂ ತಾಯಿಗೆ ಒಳ್ಳೆಯ ಹೆಸರು ತರಬೇಕು ಎನ್ನುವ ಛಲದಿಂದ ಬಾಲಕ ತಿಪ್ಪೇಶ್ ಓದುತ್ತಿದ್ದಾನೆ. ಇನ್ನು ವಿದ್ಯಾರ್ಥಿಗೆ ಶಾಲೆಯ ಶಿಕ್ಷಕರು ಓದಲು ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ ಅಲ್ಲದೇ ಬಡ ಮಕ್ಕಳಿಗೆ ಸಹಾಯ ಮಾಡುವ ಪಬ್ಲಕ್ ಟಿವಿಯ ಬೆಳಕು ಕಾರ್ಯಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Advertisement
Advertisement