ರಾಯಚೂರು: ಎಲ್ಲವೂ ಸರಿಯಿದ್ದರೂ ಬದುಕು ಕಟ್ಟಿಕೊಳ್ಳಲು ಎಷ್ಟೋ ಜನ ಪ್ರತಿನಿತ್ಯ ಪರದಾಡುತ್ತಲೇ ಇರುತ್ತಾರೆ. ಅಂತಹದರಲ್ಲಿ ಈ ದಂಪತಿ ಅಂಗವಿಕಲರು. ಇರಲು ಸ್ವಂತಃ ಸೂರಿಲ್ಲ, ಬದುಕಲು ಉದ್ಯೋಗವಿಲ್ಲ. ಆದರೂ ಮಗುವನ್ನ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಪುಟ್ಟ ಅಂಗಡಿ ನಡೆಸುತ್ತಿದ್ದ ದಂಪತಿ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾಗಿ ತಮ್ಮ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದಾರೆ.
ರಾಯಚೂರಿನ ತಾರನಾಥ ರಸ್ತೆ ಪ್ರದೇಶದಲ್ಲಿ ವಾಸವಿರುವ ಖಾಜಾ ಪಾಷಾ, ಶಬಾನಾ ಬೇಗಂ ದಂಪತಿ ಚಿಕ್ಕವಯಸ್ಸಿನಲ್ಲೇ ಪೋಲಿಯೋದಿಂದ ಕಾಲು ಕಳೆದುಕೊಂಡಿದ್ದಾರೆ. ಎರಡು ವರ್ಷದ ಹೆಣ್ಣು ಮಗು ಇರುವ ಅಂಗವಿಕಲ ದಂಪತಿಯ ಪುಟ್ಟ ಸಂಸಾರ 1,500 ರೂಪಾಯಿಯ ಬಾಡಿಗೆ ಮನೆಯಲ್ಲಿ ಸಾಗುತಿತ್ತು. ದಂಪತಿ ಮನೆ ಮುಂದೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಕಷ್ಟಕರವಾಗಿ ಜೀವನ ನಡೆಸುತ್ತಿದ್ದರು.
Advertisement
Advertisement
ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಒಂದು ಅಂಗಡಿ ನೆರವಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಬೆಳಕು ಟ್ರಸ್ಟ್ ದಂಪತಿಗೆ ವ್ಯಾಪಾರ ಮಾಡಲು ಸ್ವಂತ ಅಂಗಡಿಯ ವ್ಯವಸ್ಥೆ ಮಾಡಿಕೊಟ್ಟಿದೆ. ದಂಪತಿ ಅಂಗವಿಕಲರು ಆಗಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಟಿನ್ ಶೆಡ್‍ನ್ನ ನಿರ್ಮಿಸಿಕೊಡಲಾಗಿದೆ. ರಾಯಚೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಷಿರುದ್ದಿನ್ ಕಿರಾಣಿ ಅಂಗಡಿಗೆ ಬೇಕಾದ ದಿನಸಿ ಪದಾರ್ಥಗಳ ಸಹಾಯ ಮಾಡಿದ್ದಾರೆ.
Advertisement
ಒಟ್ಟನಲ್ಲಿ ದುಡಿದು ತಿನ್ನಲು ಸಹಾಯಕ್ಕಾಗಿ ಹಂಬಲಿಸುತ್ತಿದ್ದ ಅಂಗವಿಕಲ ದಂಪತಿಗೆ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಸ್ವಂತಃ ಅಂಗಡಿಯನ್ನು ಪಡೆದುಕೊಂಡಿರುವ ದಂಪತಿ ಈಗ ಸ್ವಾಭಿಮಾನಿಗಳಾಗಿ ಬದುಕುವ ಭರವಸೆ ವ್ಯಕ್ತಪಡಿಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=nzHgYXD2xno