ಯಾದಗಿರಿ: ನಿರ್ದಿಷ್ಟ ಸೂರಿಲ್ಲದೇ ಊರೂರು ಸುತ್ತಾಡುತ್ತ, ಯಾರಾದ್ದೋ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿ, ಚಾಪೆ ಬುಟ್ಟಿಗಳನ್ನು ಹೆಣೆಯುವ ಮೂಲಕ ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ಕೆಲವು ಕುಟುಂಬಗಳು ಜೀವನ ನಡೆಸುತ್ತಿವೆ.
ಹಂಚಿನಾಳ ಗ್ರಾಮದಲ್ಲಿ ಸುಮಾರು 66 ಕುಟುಂಬಗಳು ವಾಸ ಮಾಡುತ್ತಿದ್ದು, ಅವರ ಮೂಲ ವೃತ್ತಿ ಈಚಲು ಮರದ ಗರಿಗಳಿಂದ ಬುಟ್ಟಿ ಚಾಪೆಗಳನ್ನು ಹೆಣೆಯುವುದು. ಹೀಗಾಗಿ ಅಲೆಮಾರಿ ಜೀವನ ನಡೆಸುತ್ತಿರುವ ಅವರು ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೇ ಬೇರೆ ಬೇರೆ ಗ್ರಾಮಗಳಿಗೆ ಹೋಗುತ್ತಾರೆ. ಅಲ್ಲಿ ಅಭ್ಯವಿರುವ ಖಾಲಿ ಜಾಗದಲ್ಲಿ ಒಂದಷ್ಟು ದಿನ ಶೇಡ್ ಹಾಕಿಕೊಂಡು ಚಾಪೆ, ಬುಟ್ಟಿ ತಯಾರಿಸುತ್ತಾರೆ.
Advertisement
Advertisement
ಅಲೆಮಾರಿ ಜನಾಂಗದವರು ಸತತ ಮೂರು ವರ್ಷಗಳಿಂದ ಒಂದು ನಿರ್ದಿಷ್ಟ ಸೂರು ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ ಯಾದಗಿರಿ ಜಿಲ್ಲಾಧಿಕಾರಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂಚಿನಾಳ ಗ್ರಾಮದಲ್ಲಿ ಸರ್ವೆ ನಂಬರ್ 59ರಲ್ಲಿ 2 ಎಕರೆ ಭೂಮಿ ಮಂಜೂರು ಮಾಡಿದ್ದರು. ಆದರೆ ಈಗ ಅಧಿಕಾರಿಗಳು ಕಾಯ್ದಿರಿಸಿದ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಕ್ಕು ಪತ್ರ ವಿತರಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
Advertisement
Advertisement
ಹಂಚಿನಾಳ ಗ್ರಾಮದ ಅಲೆಮಾರಿ ಜನಾಂಗದವರು ನಿರ್ದಿಷ್ಟ ಸೂರಿನಲ್ಲಿ ವಾಸ ಮಾಡಲು ಹಪಪಿಸುತ್ತಿದ್ದಾರೆ. ನಿವೇಶನ ನಿರ್ಮಿಸಿ, ಹಕ್ಕು ಪತ್ರ ಹಂಚಿಕೆ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುವಂತೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಸರ್ಕರಕ್ಕೆ ಮನವಿ ಮಾಡಿದರು.
https://youtu.be/nuAI9tfSQSQ