ಬಾಗಲಕೋಟೆ: ಒಂದು ಕಡೆ ಬೆಂಬಿಡದೇ ಕಾಡ್ತಿರೋ ಬಡತನ, ಮತ್ತೊಂದೆಡೆ ಗಂಡನನ್ನ ಕಳೆದುಕೊಂಡು, ರಸ್ತೆ ಬದಿ ಅಂಗಡಿ ವ್ಯಾಪಾರ ಮಾಡಿಕೊಂಡು ಮನೆ ಸಾಗಿಸುತ್ತಿರುವ ದಿಟ್ಟ ಮಹಿಳೆ. ಆದರೆ ಇಬ್ಬರು ಗಂಡು ಮಕ್ಕಳ ತಾಯಿಯಾಗಿರುವ ಮಹಿಳೆಗೆ ರಸ್ತೆ ಬದಿ ತಿಂಡಿ ತಿನಿಸುಗಳ ವ್ಯಾಪಾರ ಮಾಡಿ ಜೀವನ ಸಾಗಿಸಲು ಕಷ್ಟವಾಗತ್ತಿದೆ. ಅಂದ ಹಾಗೆ ಇದು ಬಾಗಲಕೋಟೆ ಪಟ್ಟಣದ ಬಿಲಾಲ್ ಮಸೀದಿ ಹತ್ತಿರ ಇರುವ ಫಾತೀಮಾ ಮುಲ್ಲಾ ಎಂಬುವರ ಕರುಣಾಜನಕ ಕಥೆ.
ಫಾತೀಮಾ ಮುಲ್ಲಾ ಬಾಗಲಕೋಟೆಯ ವಾರ್ಡ ನಂಬರ್ 10ರ ನಿವಾಸಿ. ಈ ದಿಟ್ಟ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬ ಸಾದಿಕ್ ಪೆಂಡಲ್ ಹಾಕೋ ಕೆಲಸ ಮಾಡ್ತಾನೆ, ಇನ್ನೊಬ್ಬ ಸಮೀರ್ ವ್ಯಾಸಂಗ ಮಾಡುತ್ತಿದ್ದಾನೆ. ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಗಂಡ ತೀರಿಹೋಗಿ 15 ವರ್ಷಗಳಾಯ್ತು. ಗಂಡ ತೀರಿಹೋಗಿದ್ದಾಗಿನಿಂದ ಮನೆಯ ಜವಾಬ್ದಾರಿಯನ್ನ ತಾವೇ ನಿರ್ವಹಿಸುತ್ತಿದ್ದಾರೆ. ಈ ಮಹಿಳೆಗೆ ಕಾಲೋನಿ ಜನರೆಲ್ಲ ಸೇರಿ ಒಂದು ಒತ್ತುವ ಗಾಡಿ ಕೊಡಿಸಿಕೊಟ್ಟರು. ಆದರೆ ಸದ್ಯ ಆ ಒತ್ತುವ ಗಾಡಿ ದುರಸ್ತಿ ಅಂಚಿಗೆ ತಲುಪಿದ್ದು, ಮಳೆ ಗಾಳಿ ಬಂದರೆ ವ್ಯಾಪಾರ ಬಂದ್ ಆಗುತ್ತದೆ.
Advertisement
ಒಂದು ದಿನ ವ್ಯಾಪಾರ ನಡಿಲಿಲ್ಲ ಎಂದರೆ ಮನೆಯ ಎಲ್ಲರಿಗೂ ಉಪವಾಸವೇ ಗತೀ. ಆದರೆ ರಸ್ತೆ ಬದಿ ಸಣ್ಣ ಅಂಗಡಿ ಹಾಕಿಕೊಂಡಿರೆ ಮಹಿಳೆಗೆ ಸ್ವಂತ ಮನೆ ಇಲ್ಲ. ಇರುವ ಬಾಡಿಗೆ ಶೆಡ್ ಗೆ ಬಾಡಿಕೆ ನೀಡಲು ಆಗುತ್ತಿಲ್ಲ. ಮಕ್ಕಳಿಗೆ ಒಂದು ಒಳ್ಳೆ ಶಿಕ್ಷಣ ಕೊಡಿಸಬೇಕು ಎನ್ನುವ ಕನಸು ಹೊಂದಿರುವ ಫಾತೀಮಾ ಅವರಿಗೆ ಒಂದು ಆಶ್ರಯ ಮನೆ ಹಾಗೂ ಕಬ್ಬಿಣದಿಂದ ತಯಾರಿಸಲ್ಪಟ್ಟ ಕಪಾಟ್ ಅಂಗಡಿ ಕೊಡಿಸಿದ್ರೆ ಸ್ವಾಭಿಮಾನಿ ಜೀವನಕ್ಕೆ ಅಧಾರವಾಗುತ್ತದೆ.