ಹಾಸನ: ಬಡತನದಲ್ಲಿ ಸಾಕಷ್ಟು ಕಷ್ಟ ಪಟ್ಟು ಪಿಯುಸಿಯಲ್ಲಿ ಶೇ.91 ಅಂಕಗಳಿಸಿರುವ ವಿದ್ಯಾರ್ಥಿನಿ ಇಂದು ಬೆಳಕು ಕಾರ್ಯಕ್ರಮಕ್ಕೆ ತನ್ನ ಉನ್ನತ ಶಿಕ್ಷಣದ ಸಹಾಯ ಕೋರಿ ಬೆಳಕು ಕಾರ್ಯಕ್ರಮ ಬಂದಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಮ್ಮರಹಟ್ಟಿ ಗ್ರಾಮದ ಉಮೇಶ್ ಎಂಬವರು ಕನ್ನಡ ಮಾಧ್ಯಮದಲ್ಲಿ ಓದಿದ್ದ ಮಗಳು ಉನ್ನತ ಶಿಕ್ಷಣ ಕಾಣುವ ಕನಸನ್ನು ಕಾಣುತ್ತಿದ್ದಾಳೆ. ಉಮೇಶರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದಾಳೆ. ಇನ್ನೋಬ್ಬಳೆ ಭೂಮಿಕಾ.
Advertisement
ಗ್ರಾಮದ ಸಮೀಪದ ಶಿವೇನಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಭೂಮಿಕ, ಹೈಸ್ಕೂಲ್ ಓದಿದ್ದು 5 ಕಿಲೋಮೀಟರ್ ದೂರದ ಜಾವಗಲ್‍ನಲ್ಲಿ. ಕುಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಭೂಮಿಕ ಪ್ರತಿದಿನ ಸೈಕಲ್ ಮೂಲಕ 5 ಕಿಲೋಮೀಟರ್ ಹೋಗಿ ಎಸ್‍ಎಸ್‍ಎಲ್‍ಸಿಯಲ್ಲಿ ಗ್ರಾಮಕ್ಕೆ ಹೆಮ್ಮೆಯಾಗುವಂತೆ ಶೇಕಡ 95 ಅಂಕಗಳನ್ನು ಪಡೆದಿದ್ದಾಳೆ. ಮುಂದೆ ದಕ್ಷಿಣ ಕನ್ನಡದ ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಕೊಡಿಸಿದ್ದಾರೆ. ಅಲ್ಲಿಯೂ ಕೂಡ ತಮ್ಮ ಗ್ರಾಮ ಮತ್ತು ಪೋಷಕರಿಗೆ ಹೆಮ್ಮೆಯಾಗುವಂತೆ ಅಂಕಗಳನ್ನು ಪಡೆದ ಭೂಮಿಕ ಶೇಕಡ 91 ಅಂಕಗಳನ್ನು ಪಡೆದು ಪೋಷಕರ ಪ್ರೀತಿಗೆ ಪಾತ್ರವಾಗಿದ್ದಾಳೆ.
Advertisement
Advertisement
ಕಳೆದ ಮೂರು ವರ್ಷಗಳಿಂದ ಬರಪರಿಸ್ಥಿತಿ ಇರೋದ್ರಿಂದ ಸರಿಯಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಟ್ರಾಕ್ಟರ್ ಡ್ರೈವಿಂಗ್ ಕೆಲಸ ಮಾಡಿ ಅಷ್ಟೋ ಇಷ್ಟೋ ಬಂದಿದ್ದರಲ್ಲಿ ಜೀವನ ಸಾಗಿಸುವ ಉಮೇಶ್ ಕುಟುಂಬಕ್ಕೆ ದುಬಾರಿ ಶಿಕ್ಷಣ ವ್ಯವಸ್ಥೆ ಆತಂಕ ಸೃಷ್ಟಿಸಿದೆ.
Advertisement
ಪಿಯುಸಿಯಲ್ಲಿ ಭೂಮಿಕಾ ಒಟ್ಟು 540 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಈಗಾಗಲೆ ಸಿಇಟಿ ಪರಿಕ್ಷೆ ಬರೆದು ಇಂಜಿನಿಯರಿಂಗ್ ಸೀಟ್ ಸಿಕ್ಕಿದೆ. ಬೆಂಗಳೂರಿನ ಅಂಬೇಡ್ಕರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಸಿಕ್ಕಿದ್ರೂ ಕೂಡ ಅದನ್ನ ಈಗಾಗಲೇ ಆರ್ಥಿಕ ಕೊರತೆಯಿಂದಾಗಿ ಕೈಬಿಟ್ಟಿದ್ದಾರೆ. ತಮ್ಮ ಮಗಳಿಗೆ ಮೆಡಿಕಲ್ ಓದಿಸಬೇಕು ಎನ್ನುವ ಆಸೆ ಪೋಷಕರಿಗಿದ್ದು, ಜೊತೆಗೆ ಭೂಮಿಕಾ ಈಗಾಗಲೇ ಯಾವುದೇ ಕೋಚಿಂಗ್ ಇಲ್ಲದೆ ನೀಟ್ ಪರಿಕ್ಷೆ ಕೂಡ ಬರೆದು ಫಲಿತಾಂಶಕ್ಕೆ ಕಾಯುತಿದ್ದಾಳೆ. ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿಯಲ್ಲಿ ಇಂಗ್ಲೀಷ್‍ನಲ್ಲಿಯೇ ಪಾಸ್ ಮಾಡುವ ಮೂಲಕ ಸಾಧನೆ ಮಾಡಿರುವ ಭೂಮಿಕಾಗೆ ಈಗ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.
ಮೆಡಿಕಲ್ ಓದಬೇಕು ಎನ್ನುವ ಭೂಲಿಕಾಳ ಆಸೆಗೆ ನೀಟ್ ಪರಿಕ್ಷೆಯ ಫಲಿತಾಂಶ ಉತ್ತರ ನೀಡಲಿದೆ. ಮೆಡಿಕಲ್ ಸಿಗದಿದ್ದಲ್ಲಿ ಇಂಜಿನಿಯರಿಂಗ್ ಓದುವೆ ಎನ್ನುವ ಭೂಮಿಕ ಮತ್ತು ಆಕೆಯ ಕುಟುಂಬಸ್ಥರು ಆಕೆಯ ವಿದ್ಯಾಭ್ಯಾಸಕ್ಕಾಗಿ ಸಹಾಯಕ್ಕಾಗಿ ಕೇಳಿಕೊಂಡಿದ್ದಾರೆ.
https://www.youtube.com/watch?v=e502cCeXTvE