ಹಾವೇರಿ: ಮೀನು ಹಿಡಿಯುವ ತಂದೆ, ತಾಯಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಮಕ್ಕಳನ್ನು ಎಂಜಿನಿಯರಿಂಗ್ ಓದಿಸುತ್ತಿದ್ದಾರೆ. ಈ ಬಡದಂಪತಿಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಥಿಕ ಸಹಾಯ ಬೇಕಿದೆ.
ಹೌದು. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದಲ್ಲಿ ಇಬ್ಬರು ಪ್ರತಿಭಾವಂತ ಮಕ್ಕಳಿರುವ ಪುಟ್ಟ ಕುಟುಂಬ. ತಂದೆ ಮಾರುತಿ ಕಿಳ್ಳಿಕ್ಯಾತರ್ ಮೀನು ಹಿಡಿದು ಮಾರಾಟ ಮಾಡಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ತಾಯಿ ಪುಷ್ಪಾ ಕಿಳ್ಳಿಕ್ಯಾತರ್ ಅಂಗನಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕಿ. ಮನೆಯಲ್ಲಿ ಬಡತನವಿದ್ದರೂ ಇಬ್ಬರೂ ಮಕ್ಕಳನ್ನ ಶಾಲೆಗೆ ಕಳುಹಿಸಿ ಈಗ ಎಂಜಿನಿಯರಿಂಗ್ ವರೆಗೂ ಓದಿಸುತ್ತಿದ್ದಾರೆ.
Advertisement
Advertisement
ಅವಿನಾಶ್ ಮತ್ತು ಆಕಾಶ್ ಇಬ್ಬರೂ ಬೆಂಗಳೂರಿನ ವೈಟ್‍ಪೀಲ್ಡ್ ನಲ್ಲಿರೋ ಜೈರಾಮ್ ಇಂಜಿನಿಯರಿಂಗ್ ಕಾಲೇಜ್‍ನಲ್ಲಿ ಬಿಇ ಓದುತ್ತಿದ್ದಾರೆ. ಅವಿನಾಶ್ 7ನೇ ಸೆಮಿಸ್ಟರ್ ನಲ್ಲಿದ್ದರೆ. ಆಕಾಶ ಮೂರನೇ ಸೆಮಿಸ್ಟರ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಈಗ ಮಕ್ಕಳ ಶಿಕ್ಷಣದ ಖರ್ಚು ಭರಿಸುವುದು ಕಷ್ಟವಾಗಿದೆ. ಸರ್ಕಾರಿ ಶುಲ್ಕವನ್ನ ಕಟ್ಟಲೂ ಆಗುತ್ತಿಲ್ಲ. ಜೊತೆಗೆ ತಾಯಿ ಪುಷ್ಪಾಗೆ ಅನಾರೋಗ್ಯ, ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಬೇಕಿದೆ ಎಂದು ಹೇಳುತ್ತಿದ್ದಾರೆ.
Advertisement
ಈ ಬಡದಂಪತಿ ಇಬ್ಬರ ಮಕ್ಕಳ ಶಿಕ್ಷಣಕ್ಕಾಗಿ ನಿತ್ಯವೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಶಿಕ್ಷಣದ ಮಹತ್ವ ಅರಿತಿರುವ ಈ ಪೋಷಕರಿಗೆ ಆರ್ಥಿಕ ಸಹಾಯದ ಸಾಥ್ ನೀಡುವುದು ನಮ್ಮ ಉದ್ದೇಶ. ಈ ಬಡ ದಂಪತಿಯು ನಮ್ಮ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.