ಬೆಂಗಳೂರು: ವಿದ್ಯೆಗೆ ಬಡತನ ಅಡ್ಡಿಯಲ್ಲ ಅನ್ನೋದಕ್ಕೆ ಈ ಬಾಲಕನೇ ಸಾಕ್ಷಿ. ಬಡತನದಲ್ಲಿದ್ದ ಈತನಿಗೆ ವಿದ್ಯಾಭ್ಯಾಸಕ್ಕೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಸಹಾಯ ಮಾಡಿತ್ತು. ಅದರ ಸದುಪಯೋಗ ಪಡೆದಕೊಂಡ ಈತ ಇಂದು ಪಿಯುಸಿಯಲ್ಲಿ ಟಾಪರ್ ಆಗಿದ್ದಾನೆ.
ಮೂಲತಃ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಿರೋ ಅಂಕಿತ್ ತಂದೆ ಗ್ರಾನೈಟ್ ವ್ಯಾಪಾರ ಮಾಡಿಕೊಂಡಿದ್ರು. ಎಸ್‍ಎಸ್‍ಎಲ್‍ಸಿ ಯಲ್ಲಿ 99.05 % ತೆಗೆದುಕೊಂಡ ಈತನ ಮುಂದಿನ ವಿದ್ಯಾಭ್ಯಾಸ ಮಾಡಲು ಹಣಕಾಸಿನ ತೊಂದರೆ ಇತ್ತು. ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿಗೆ ಸೇರಲು ಪಬ್ಲಿಕ್ ಬೆಳಕು ಕಾರ್ಯಕ್ರಮ ಶಾಲೆ ದಾಖಲಾತಿ ಫೀಸ್ ಕಟ್ಟಿ ಮಲ್ಲೇಶ್ವರಂನ ವಿದ್ಯಾಮಂದಿರ ಕಾಲೇಜಿಗೆ ಸೇರಿಸಲಾಗಿತ್ತು.
Advertisement
Advertisement
ಬೆಳಕು ಕಾರ್ಯಕ್ರಮದಿಂದ ಶಿಕ್ಷಣಕ್ಕೆ ನೆರವು ಪಡೆದ ಈತ ಶ್ರದ್ಧೆಯಿಂದ ಓದಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಶೇ. 97.05 ಅಂಕ ಪಡೆದುಕೊಂಡು ಟಾಪರ್ ಆಗಿದ್ದಾನೆ. ದ್ವಿತೀಯ ಪಿಯುಸಿಯಲ್ಲಿ 575 ಅಂಕ ಪಡೆದ ಅಂಕಿತ್ ಮುಂದೆ ಎಂಜಿನಿಯರಿಂಗ್ ವ್ಯಾಸ್ಯಾಂಗ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದಾನೆ. ಆದ್ರೆ ಅಷ್ಟೊಂದು ದುಡ್ಡು ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಸಲು ಪೋಷಕರಲ್ಲಿ ಶಕ್ತಿಯಲ್ಲಿ. ಅದ್ದರಿಂದ ಪೋಷಕರು ಮತ್ತು ಅಂಕಿತ್ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವಂತೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಕೇಳ್ತಿದ್ದಾರೆ.