ಬೆಳಗಾವಿ: ಶಾಲೆ ಕಲಿತು ದೊಡ್ಡ ಅಧಿಕಾರಿಯಾಗುವ ಗುರಿ, ಆದರೆ ಕಿತ್ತು ತಿನ್ನುವ ಬಡತನ. ಚಿಕ್ಕ ವಯಸ್ಸಿನಲ್ಲಿಯೇ ತಾಯಿ ತಂದೆಯನ್ನು ಕಳೆದುಕೊಂಡ ಬಾಲಕ ಶಾಲೆ ಬಿಟ್ಟು ಹಾಲು, ಪೇಪರ್ ಹಂಚಿ ನಂತರ ಪಿವೂನ್ ಕೆಲಸ ಮಾಡುತ್ತ ಕುಟುಂಬವನ್ನ ಸಲಹುತ್ತಿದ್ದಾನೆ.
ಈತನ ಹೆಸರು ಆನಂದ ನಾಯಿಕ. ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ನಿವಾಸಿ. ಚಿಕ್ಕ ವಯಸ್ಸಿನಲ್ಲಿಯೆ ತಂದೆ-ತಾಯಿಯನ್ನು ಕಳೆದುಕೊಂಡ ಆನಂದನಿಗೆ ಶಾಲೆ ಕಲಿತು ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂಬ ಗುರಿಯಿದೆ. ಬೆಳಗಾವಿಯ ಚಿಕ್ಕೂಂಬಿ ಮಠದ ಅನಾಥ ಆಶ್ರಮದಲ್ಲಿ ಇದ್ದು ಎಸ್‍ಎಸ್‍ಎಲ್‍ಸಿ ವರಗೆ ವ್ಯಾಸಂಗ ಮಾಡಿ 70% ಅಂಕ ಪಡೆದಿದ್ದಾನೆ.
Advertisement
ಆದರೆ ಮನೆಯಲ್ಲಿ ಇಳಿವಯಸ್ಸಿನ ಅಜ್ಜಿ ಜೊತೆಗೆ ಚಿಕ್ಕ ವಯಸ್ಸಿನ ತಂಗಿಯ ದಿನ ಹೊಟ್ಟೆ ತುಂಬಿಸುವ ಜವಾಬ್ದಾರಿ ಆನಂದನ ಮೇಲೆದೆ. ಅಜ್ಜಿ ಹಾಗೂ ತಂಗಿಯ ಹೊಟ್ಟೆ ತುಂಬಿಸಲು ಆನಂದ ಹಾಲು, ಪೇಪರ್ ಹಂಚಿ ಸಂಘ- ಸಂಸ್ಥೆಯೊಂದರಲ್ಲಿ ಪಿವೂನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಜೊತೆಗೆ ಸಂಜೆಯಾಗುತ್ತಿದ್ದಂತೆ ಪಿಗ್ಮಿ ಕಲೆಕ್ಷನ್ ಮಾಡಿ ಬಂದ ಆದಾಯದಿಂದ ಮನೆ ನಡೆಸುತ್ತಿದ್ದಾನೆ.
Advertisement
ಆನಂದ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯನ್ನು ಹೊತ್ತು ವ್ಯಾಸಂಗವನ್ನು ತ್ಯಜಿಸಿ ದುಡುಮೆ ಮಾಡುತ್ತಿರುವುದು ವಿಶಾದನಿಯ. ಕಲಿಯುವ ವಯಸ್ಸಿನಲ್ಲಿ ದುಡಿಯುವ ಜವಾಬ್ದಾರಿ ಬಂದಿದ್ದು ತಮ್ಮ ಕ್ಲಾಸ್‍ಮೇಟ್ ಸ್ಥಿತಿಯನ್ನು ಕಂಡು ಅಯ್ಯೋ ಅನ್ನಿಸುತ್ತದೆ ಎಂದು ಗೆಳೆಯ ಶಿವರಾಜ ಹೇಳುತ್ತಾರೆ.
Advertisement
ತೊಂದರೆಯಲ್ಲಿರುವ ಆನಂದ ನಾಯಿಕ್‍ಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಹಾಯ ಬೇಕಾಗಿದೆ. ಸಹೃದಯ ದಾನಿಗಳು ಸಹಾಯ ಮಾಡಿದ್ದಲ್ಲಿ ವ್ಯಾಸಂಗ ಮುಂದುವರೆಸಿ ಗುರಿ ತಲುಪುವ ಹಂಬಲ ಆನಂದನದು.
Advertisement