ಬೆಳಗಾವಿ (ಚಿಕ್ಕೋಡಿ): ಓದಿನಲ್ಲಿ ಮುಂದಿರುವ ಬಾಲಕಿ ಈಗ ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಉತ್ಸಾಹದಲ್ಲಿರುವ ಬಾಲಕಿಗೆ ಬಡತನ ಅಡ್ಡಿಯಾಗಿದೆ.
ಅಥಣಿ ತಾಲೂಕಿನ ಮೋಳೆ ಗ್ರಾಮದ ವಲೀಮಾ ಗಡ್ಡೇಕರ ಪುತ್ರಿಯಾಗಿರುವ ಅಲ್ಮಾಸ್‍ಗೆ ಈಗ 14 ವರ್ಷ. ಚಿಕ್ಕೋಡಿ ತಾಲೂಕಿನ ಯಾದನವಾಡಿ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತೆ. ಓದಿನಲ್ಲಿ ಸದಾ ಮುಂದು. ಕುಸ್ತಿ ಕ್ರೀಡೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
Advertisement
ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡುವುದೇ ಅಪರೂಪ. ಆದರೆ ಈ ಬಾಲಕಿಗೆ ಯಾವುದೇ ಕಟ್ಟಪ್ಪಣೆಗಳನ್ನು ವಿಧಿಸದೇ ಕ್ರೀಡೆ ಮತ್ತು ವಿದ್ಯಾಭ್ಯಾಸಕ್ಕೆ ತಾಯಿ ಪ್ರೋತ್ಸಾಹ ನೀಡುತ್ತಿರೋದು ಹೆಮ್ಮೆಯ ಸಂಗತಿ. ತಾಯಿಯ ಪ್ರೋತ್ಸಾಹಕ್ಕೆ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರು ಹಾಗೂ ಸಂಬಂಧಿಕರು ಸಹಕಾರ ನೀಡುತ್ತಿದ್ದಾರೆ.
Advertisement
Advertisement
ಕಡು ಬಡತನದಲ್ಲಿಯೂ ವಿದ್ಯಾಭ್ಯಾಸ ಮಾಡುತ್ತಾ ಅಲ್ಮಾಸ್ ಕುಸ್ತಿಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆದ್ದು ಕೀರ್ತಿ ತರಬೇಕೆಂದು ಬಾಲಕಿಯ ತಾಯಿ ವಲೀಮಾ ಮಗಳ ಸಾಧನೆಗೆ ಸೂಕ್ತ ತರಬೇತಿ ಹಾಗೂ ಕುಸ್ತಿ ಕ್ರೀಡೆಗೆ ಬೇಕಾಗಿರುವ ಗುಣಮಟ್ಟದ ಸಲಕರಣೆಗಳನ್ನು ಕೊಡಿಸಿ ಅವಳ ಪ್ರತಿಭೆಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.
Advertisement
ಒಟ್ಟಿನಲ್ಲಿ ಮುಸ್ಲಿಂ ಬಾಲಕಿಯೋರ್ವಳು ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಧನೆಯ ಹಾದಿಯಲ್ಲಿ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭಾವಂತೆಗೆ ಯಾರಾದ್ರೂ ದಾನಿಗಳು ಸಹಾಯ ಮಾಡುತ್ತಾರೆಂವ ವಿಶ್ವಾಸದಲ್ಲಿ ಪೋಷಕರಿದ್ದಾರೆ.
https://www.youtube.com/watch?v=danIGq60-E0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv