– ಬೆಳಗಾವಿ ಗಡಿಯಲ್ಲಿ ಮಹಿಳಾ ಡಾಕ್ಟರ್ ಕನ್ನಡ ಸೇವೆ
ಬೆಳಗಾವಿ: ಇಂದು ಮಹಿಳಾ ದಿನಾಚರಣೆ. ಸ್ತ್ರೀಯಿಂದಲೇ ಸಮಾಜ, ಸ್ತ್ರೀಯಿಂದಲೇ ಸಂಸಾರ, ಆಕೆಯಿಂದಲೇ ಸರ್ವವೂ. ಯಶಸ್ಸಿನ ಹಿಂದಿನ ಶಕ್ತಿ ಆಕೆ. ನಿತ್ಯದ ಸವಾಲುಗಳನ್ನು ಎದುರಿಸಿ ಮುನ್ನುಗಿ ಸಾಧಿಸುವ ಸಾಧಕಿ. ಅಂತಹದ್ದೇ ಮಹಿಳಾ ಸಾಧಕಿಯೊಬ್ಬರ ಕುರಿತ ಸ್ಟೋರಿ ಇಲ್ಲಿದೆ.
ಕರ್ನಾಟಕದ ಮುಕುಟ ಬೆಳಗಾವಿ ಎಂದಾಕ್ಷಣ ನೆನೆಪಾಗೋದು ಕುಂದಾ ಒಂದೆಡೆಯಾದ್ರೆ, ಮತ್ತೊಂದೆಡೆ ಗಡಿ ವಿಚಾರವಾಗಿ ಎಂಇಎಸ್ ಪುಂಡಾಟ. ಆದರೆ ಇಲ್ಲೊಬ್ಬರು ಮರಾಠಿ ಮಹಿಳೆ ಕನ್ನಡಿಗರ ಮನ ಗೆದ್ದಿದ್ದಾರೆ. ಎಂಇಎಸ್ ಬೆದರಿಕೆಗೆ ಬಗ್ಗದೇ ದಶಕಗಳಿಂದ ಕನ್ನಡಿಗರ ಪರ ನಿಂತಿದ್ದಾರೆ.
Advertisement
Advertisement
ಬೆಳಗಾವಿಯಲ್ಲಿ ಕನ್ನಡ, ಮರಾಠಿ ಎಂದು ಭಾಷಾ ವಿಷಬೀಜವನ್ನು ಬಿತ್ತಿ ರಾಜಕಾರಣ ಮಾಡುವವರೇ ಹೆಚ್ಚು. ಇಂತಹ ಕೊಳಕು ವಾತಾವಣರದ ಮಧ್ಯೆಯೂ ಕನ್ನಡಿಗರ ಪರವಾಗಿ ನಿಂತ ದಿಟ್ಟೆ ಡಾಕ್ಟರ್ ಅಂಜಲಿ ಜೋಷಿ. ಎಂಇಎಸ್ ಬೆದರಿಕೆಗೆ ಅಂಜದೆ 48 ವರ್ಷಗಳಿಂದ ಕನ್ನಡಿಗರಿಗಾಗಿ ದುಡಿಯುತ್ತಿರುವ ಧೀರೆ. ತಮ್ಮ 35ನೇ ವಯಸ್ಸಿಯನ್ನು ಕನ್ನಡವನ್ನು ಕಲಿತು ಕನ್ನಡಿಗರಿರುವ ಹಳ್ಳಿಗಳಿಗೆ ಹೋಗಿ ಆರೋಗ್ಯದ ಅರಿವು ಮೂಡಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಕನ್ನಡ ಕುಟುಂಬಗಳಿಗೆ, 600ಕ್ಕೂ ಹೆಚ್ಚು ಹಳ್ಳಿಗಳಿಗೆ ಸೇವೆಗೈದಿದ್ದಾರೆ. ಉಚಿತ ಹಾಗೂ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿರುವ ಅಂಜಲಿ ಅವರು 71 ನೇ ಇಳಿ ವಯಸ್ಸಿನಲ್ಲೂ ಕನ್ನಡಿಗರ ಆರೋಗ್ಯದ ಆಸರೆಯಾಗಿದ್ದಾರೆ.
Advertisement
Advertisement
ಬೆಳಗಾವಿ ಧಾರವಾರ ಅದರಲ್ಲೂ ಕಾರವಾರದ ಕಾಡಂಚಿನ ಕುಗ್ರಾಮಗಳಲ್ಲಿ ಮೊಟರ್ ಸೈಕಲ್ ಮೇಲೆ ತೆರಳಿ ಡೆಲಿವರಿ ಮಾಡಿಸಿದ್ದಾರೆ. ಧಾರವಾಡ, ಕಾರವಾರ ಆಕಾಶವಾಣಿಗಳಲ್ಲಿ ಕನ್ನಡದಲ್ಲೇ ಕಾರ್ಯಕ್ರಮ ನೀಡಿ ಆರೋಗ್ಯದ ಅರಿವು ಮೂಡಿಸಿದ್ದಾರೆ.