ಬೆಳಗಾವಿ: ಮುಡಾ ಅಕ್ರಮದ (MUDA Scam) ಬಗ್ಗೆ ಜಾರಿ ನಿರ್ದೇಶನಾಲಯ (ED) ಲೋಕಾಯುಕ್ತಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ (Byrathi Suresh) ಗರಂ ಆಗಿದ್ದಾರೆ.
ಇಡಿ ಪತ್ರದ ಬಳಿಕ ಮಾಧ್ಯಮಗಳ ಕೈಗೆ ಸಿಗದೇ ನಾಪತ್ತೆಯಾಗಿದ್ದ ಬೈರತಿ ಸುರೇಶ್ ಇಂದು ಬೆಳಗಾವಿ ಅಧಿವೇಶನದಲ್ಲಿ ಪಬ್ಲಿಕ್ ಟಿವಿಗೆ ಸಿಕ್ಕಿದರು.
Advertisement
ಈ ವೇಳೆ, ಪ್ರಕರಣ ನ್ಯಾಯಾಲಯದಲ್ಲಿದೆ. ನಾನೇನು ನೇಣು ಹಾಕೊಳ್ಳೊಕ್ಕೆ ಆಗುತ್ತಾ? ನಾನು ಯಾರ ಕೈಗೂ ಸಿಗದೇ ಹೋಗಿಲ್ಲ. ನಾನು ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ನಾನು ಎಲ್ಲರಿಗೂ ಸಿಗುತ್ತಿದ್ದೇನೆ ಎಂದು ಬೈರತಿ ಸಮರ್ಥನೆ ನೀಡಿದರು. ಇದನ್ನೂ ಓದಿ: MUDA Scam Exclusive | ಸಿದ್ದರಾಮಯ್ಯಗೆ ಇಡಿ ಶಾಕ್ – ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ. ಇಡಿ ಪತ್ರದಲ್ಲಿ ಏನಿದೆ?
Advertisement
Advertisement
ಇಡಿ ಪತ್ರದ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಸುಳ್ಳು. ನನ್ನ ವಿರುದ್ಧ ವರದಿ ಕೊಟ್ಟಿಲ್ಲ. ಯಾವ ಅಧಿಕಾರಿ 144 ಫೈಲ್ ತಗೆದುಕೊಂಡು ಹೋಗಿದ್ದಾರೆ? ನಾನು ಅಲ್ಲಿಗೆ ಹೋಗಿದ್ದೆ ಅಂತ ಯಾರು ಹೇಳಿದ್ದಾರೆ? ಮುಡಾ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಕೆಂಡಾಮಂಡಲವಾದರು.
Advertisement
ಇದೇ ವೇಳೆ ಯಾರು ಯಾವುದೇ ಪತ್ರ ಬರೆದಿಲ್ಲ. ಅಧಿಕೃತವಾಗಿ ಇಡಿ ಪತ್ರ ಬರೆದಿದ್ಯಾ? ಪತ್ರ ಎಲ್ಲವೂ ಮಾಧ್ಯಮ ಸೃಷ್ಟಿ ಎಂದು ಹೇಳಿ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು.