ಮೊದಲ ದಿನವೇ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆ

Public TV
1 Min Read
Basanagouda Patil Yatnal 2

ಬೆಳಗಾವಿ: ಮೊದಲ ದಿನವೇ ವಿಧಾನಸಭೆ ಕಲಾಪದಲ್ಲಿ ಬಿಜೆಪಿ (BJP)‌ ನಾಯಕರ‌ ನಡುವಿನ ಸಮನ್ವಯತೆ ಕೊರತೆ ಬಯಲಾಗಿದೆ. ಸಂತಾಪ ಸೂಚನೆ ಬಳಿಕ ವಕ್ಫ್ ಪ್ರಕರಣ ಕುರಿತು ಆರ್.ಅಶೋಕ್ (R Ashok) ನಿಲುವಳಿ ಸೂಚನೆಗೆ ಅವಕಾಶ ಕೋರಲು ಮುಂದಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ (Congress) ಸಚಿವರು ಆಕ್ಷೇಪಿಸಿದ ಕಾರಣ ಸದನದಲ್ಲಿ ಗದ್ದಲವುಂಟಾಯಿತು. ಈ ಗದ್ದಲದ ಮಧ್ಯೆಯೇ ಪಂಚಮಸಾಲಿ ಹೋರಾಟಕ್ಕೆ ಸರ್ಕಾರದ ತಡೆ ಬಗ್ಗೆ ಚರ್ಚೆಗೆ ಏಕಾಏಕಿ ಯತ್ನಾಳ್ (Basanagouda Patil Yatnal) ಎದ್ದು ನಿಂತು ಒತ್ತಾಯಿಸಿದರು. ಇದರಿಂದ ಕೆಲ ಕ್ಷಣ ಆರ್ ಅಶೋಕ್‌ಗೆ ಗೊಂದಲವುಂಟಾಯ್ತು.

ಈ ಸಂದರ್ಭದಲ್ಲಿ ಯತ್ನಾಳ್ ಜತೆ ಕೈಜೋಡಿಸಿದ ಪಂಚಮಸಾಲಿ ಸಮುದಾಯದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಸರ್ಕಾರ ಪ್ರತಿಭಟನೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿ ಧರಣಿಗೆ ಮುಂದಾದರು.

ಈ ವೇಳೆ ಬಿಜೆಪಿ ಕಾಲೆಳೆದ ಕಾಂಗ್ರೆಸ್ ಸದಸ್ಯರು, ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎಂದು ಟಾಂಗ್ ಕೊಟ್ಟರು. ಕೊನೆಗೆ ಎಚ್ಚೆತ್ತ ಅಶೋಕ್, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಡೆ ವಿಚಾರಕ್ಕೆ ಡೈವರ್ಟ್ ಆಗುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಪ್ರಯತ್ನಿಸಿದರು.  ಇದನ್ನೂ ಓದಿ: ಅನುದಾನ ಕೊಟ್ಟವರ ಕಡೆ ನಾನು: ಕಾಂಗ್ರೆಸ್‌ ಪರ ಎಸ್‌ಟಿಎಸ್‌ ಬ್ಯಾಟಿಂಗ್‌

 

ಪಂಚಮಸಾಲಿ ಹೋರಾಟಕ್ಕೆ ಯಾಕೆ ತಡೆ ಮಾಡಿದೆ ಸರ್ಕಾರ ಅಂತ ಅಶೋಕ್ ಆಕ್ರೋಶ ಹೊರಹಾಕಿದರು. ಯತ್ನಾಳ್ ಬೆಂಬಲಿಸಿ ಬಿಜೆಪಿಯ ಉಳಿದ ಸದಸ್ಯರು ಸಹ ಸದನದ ಬಾವಿಗಿಳಿದರು. ಬಿಜೆಪಿಯಿಂದ ಧರಣಿ ಹಿನ್ನೆಲೆ ಕಲಾಪ‌ವನ್ನು ಮಧ್ಯಾಹ್ನ 2:30 ಕ್ಕೆ ಸ್ಪೀಕರ್ ಖಾದರ್ ಮುಂದೂಡಿಕೆ‌ ಮಾಡಬೇಕಾಯ್ತು. ಇದನ್ನೂ ಓದಿ: MUDA Scam | ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ

ಇನ್ನು ವಿಧಾನಸಭೆ ಕಲಾಪದಲ್ಲಿ ಒಟ್ಟಿಗೆ ಭಾಗವಹಿಸಿದರೂ ವಿಜಯೇಂದ್ರ – ಯತ್ನಾಳ್ ಮುಖಾಮುಖಿ ಆಗಲಿಲ್ಲ. ಪರಸ್ಪರ ಮಾತೂ ಆಡಲಿಲ್ಲ, ನೋಡಲೂ ಇಲ್ಲ. ಅವರಲ್ಲಿ ಇವರಿಲ್ಲಿ ಅನ್ನುವಂತಾಗಿತ್ತು. ಇದೇ ಸಂದರ್ಭದಲ್ಲಿ ತಮ್ಮ ಶಿಫಾರಸ್ಸಿಗೆ ಕೋರ್ ಕಮಿಟಿ ಶಿಫಾರಸು ಮಾಡಿದ ಬಗ್ಗೆ ಶಾಸಕ ಎಸ್ ಟಿ ಸೋಮಶೇಖರ್ ಅವರು, ವಿಜಯೇಂದ್ರ ಜತೆ ಕೆಲ ಕ್ಷಣ ಮಾತನಾಡಿ ಬೇಸರ ವ್ಯಕ್ತಪಡಿಸಿದರು.

 

Share This Article