ಬೆಳಗಾವಿ: ಪ್ರತಿ ತಿಂಗಳು ಎಷ್ಟು ಮಂದಿ ಪದವೀಧರರ ಕೈಗೆ ಯುವನಿಧಿ (Yuva Nidhi) ಹಣ ಸೇರುತ್ತಿದೆ ಎಂಬ ಮಾಹಿತಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಪರಿಷತ್‌ನಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನವೀನ್ ಅವರು ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಆದರೆ ಯುವನಿಧಿಗೆ ನೋಂದಣಿ ಆಗಿರೋದು ಕಡಿಮೆ ಆಗಿದೆ ಯಾಕೆ? ಯುವನಿಧಿಗೆ ಪ್ರತಿ ತಿಂಗಳು ಹಣ ಕೊಡ್ತಿದ್ದೀರಾ? ಎಷ್ಟು ಹಣ ಕೊಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದರು.
Advertisement
Advertisement
ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್, ಈವರೆಗೆ 1,81,699 ಪದವೀಧರು ಯುವನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ 1,45,978 ಪದವೀಧರಿಗೆ ಹಣ ಕೊಡಲಾಗಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮೊದಲ ದಿನವೇ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆ
Advertisement
ನಮ್ಮ ಗ್ಯಾರಂಟಿಯಲ್ಲಿ 2023-24 ರ ಅವಧಿಯಲ್ಲಿ ವಿದ್ಯಾರ್ಥಿಗಳು ಪದವಿ ಮುಗಿಸಿರಬೇಕು. ಉದ್ಯೋಗ ಸಿಗದೇ 6 ತಿಂಗಳು ಆಗಿದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಗುತ್ತದೆ. ಯುವನಿಧಿಗೆ ಅವರೇ ಅರ್ಜಿ ಹಾಕಬೇಕು. ಅರ್ಜಿ ಹಾಕಿದವರಿಗೆ ಯುವನಿಧಿ ಕೊಡುತ್ತಿದ್ದೇವೆ ಎಂದರು.
Advertisement
1,81,669 ಪದವೀಧರ ಪೈಕಿ 1,45,978 ಪದವೀಧರಿಗೆ ಹಣ ಪಾವತಿ ಮಾಡಲಾಗಿದೆ. ಉಳಿದವರ ದಾಖಲೆ ಪರಿಶೀಲನೆ ಆಗಿಲ್ಲ. ಉಳಿದವರು ಉನ್ನತ ಶಿಕ್ಷಣಕ್ಕೆ ಹೋಗಿದ್ದಾರೆ. ಹೀಗಾಗಿ ಉಳಿದವರಿಗೆ ಹಣ ಹಾಕಿಲ್ಲ. ಪ್ರತಿ ತಿಂಗಳು ಯುವನಿಧಿ ಹಣ ಹೋಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅನುದಾನ ಕೊಟ್ಟವರ ಕಡೆ ನಾನು: ಕಾಂಗ್ರೆಸ್ ಪರ ಎಸ್‌ಟಿಎಸ್ ಬ್ಯಾಟಿಂಗ್
ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯವನಿಧಿಯನ್ನು ಪ್ರಕಟಿಸಲಾಗಿತ್ತು. ಪದವೀಧರರಿಗೆ ಪ್ರತಿತಿಂಗಳು 3,000 ರೂ. ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು.