ಬೆಳಗಾವಿ: ಸುವರ್ಣ ಸೌಧದ ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಇನ್ನೂ ಅಳವಡಿಸದ ವಿಚಾರ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ಬೆಳಗಾವಿ ವಿಧಾನಸಭೆಯ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಾಕಬೇಕು ಅಂತಾ ಹೇಳಿ ಎರಡು ವರ್ಷ ಆದ್ರೂ ಹಾಕಿಲ್ಲ ಎಂದು ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಎರಡು ಡೋಸ್ ಆಗಿದೆ, 2023ಕ್ಕೆ ಬೂಸ್ಟರ್ ಡೋಸ್ – ಜೆಡಿಎಸ್‌ಗೆ ತಿವಿದ ರಾಜೇಂದ್ರ
Advertisement
Advertisement
ಈ ವೇಳೆ ಕುಳಿತುಕೊಳ್ಳುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನ್ನದಾನಿಗೆ ಸೂಚಿಸಿದರು. ಸ್ಪೀಕರ್ ಮಾತು ಪರಿಗಣಿಸದೇ ಅನ್ನದಾನಿ ಅವರು ತಮ್ಮ ಆಸನದಿಂದ ಹೊರಗೆ ಬಂದು ನಿಂತರು. ಇದನ್ನೂ ಓದಿ: ಕರೆನ್ಸಿ ನೋಟುಗಳ ಮೇಲೆ ನೇತಾಜಿ ಫೋಟೋ ಮುದ್ರಿಸಿ: ಹರೇನ್ ಬಿಸ್ವಾಸ್ ಮನವಿ
Advertisement
ಈ ವೇಳೆ ಮತ್ತೆ ಕುಳಿತುಕೊಳ್ಳುವಂತೆ ಶಾಸಕ ಅನ್ನದಾನಿಗೆ ಸ್ಪೀಕರ್ ವಾರ್ನಿಂಗ್ ನೀಡಿ, ಸಂತೆಯಲ್ಲಿ ಮಾತಾಡಿದಂತೆ ಜೋರಾಗಿ ಒದರಿಕೊಂಡು ಮುಂದೆ ಬಂದರೆ ಅದು ಅಶಿಸ್ತಿನ ಪರಮಾವಧಿ ಎಂದೇ ಪರಿಗಣಿಸಬೇಕಾಗುತ್ತದೆ. ಡಾ. ಅನ್ನದಾನಿ ನೀವು ಗೌರವದಿಂದ ನಡೆದುಕೊಳ್ಳಿ ಎಂದು ಸ್ಪೀಕರ್ ಕಾಗೇರಿ ಹೇಳಿದರು.
Advertisement
ಇದೇ ವೇಳೆ ಅಂಬೇಡ್ಕರ್ ಪೋಟೋ ಹಾಕುವುದಕ್ಕೆ ವಿವಾದವೇ ಆಗಬಾರದು ಎಂದು ಸಿದ್ದರಾಮಯ್ಯ ಹೇಳಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ
ಅಂಬೇಡ್ಕರ್ ಫೋಟೋ ಹಾಕುವ ವಿಚಾರ ಕಲಾಪದಲ್ಲಿ ಚರ್ಚೆಯ ವಿಚಾರ ಅಲ್ಲ. ಅಂಬೇಡ್ಕರ್ ಫೋಟೋ ಹಾಕಿಯೇ ಹಾಕ್ತೀವಿ. ಅಂಬೇಡ್ಕರ್ ಫೋಟೋ ಒಳಗೊಂಡಂತೆ ಇನ್ನೂ ಯಾರದೆಲ್ಲ ಫೋಟೋ ಹಾಕಬೇಕು ಎಂದು ಪ್ರಮುಖ ನಾಯಕರ ಸಲಹೆ ಪಡೆದು ಹಾಕ್ತೀವಿ ಎಂದ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದರು.
ಸದನದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡುವುದಿದ್ದರೂ ಮೊದಲು ನನ್ನ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.