– ಬೆಳಗಾವಿಯ 9 ಕಾರ್ಖಾನೆಗಳಿಗೆ ಶಾಕ್
ಬೆಳಗಾವಿ: ರೈತರಿಗೆ ಕಬ್ಬಿನ ಬಾಕಿ ಬಿಲ್ ಕೊಡದ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲಿಗೆ ಆದೇಶ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಲು ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ರೈತರಿಗೆ ಹಣ ಪಾವತಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಆಯಾ ತಹಶೀಲ್ದಾರರಿಗೆ ಸಕ್ಕರೆ ಕಾರ್ಖಾನೆಯ ಸಕ್ಕರೆ ಮುಟ್ಟುಗೋಲು ಹಾಕಲು ಸೂಚನೆ ನೀಡಿದ್ದಾರೆ.
Advertisement
Advertisement
9 ಕಾರ್ಖಾನೆಗಳು ಯಾವುವು?
ಖಾನಾಪುರ ಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ, ಮುನವಳ್ಳಿ ರೇಣುಕಾ ಶುಗರ್ಸ್, ಕೊಳವಿಯ ಗೋಕಾಕ್ ಶುಗರ್ಸ್, ಬೈಲಹೊಂಗಲದ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ, ಬೆಲ್ಲದ ಬಾಗೇವಾಡಿ ವಿಶ್ವರಾಜ್ ಶುಗರ್ಸ್, ಅಥಣಿ ಶುಗರ್ಸ್, ಕೃಷ್ಣಾ ಶುಗರ್ಸ್, ಉಗಾರ ಶುಗರ್ಸ್, ಎಂ.ಕೆ ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿ ಜಿಲ್ಲೆಯ ಒಂಬತ್ತು ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲಿಗೆ ಆದೇಶ ನೀಡಲಾಗಿದೆ.