ಶ್ರೀನಗರ: ಪಂಜಾಬ್‍ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಹಾರಿದ ಗುಂಡು ತಗುಲಿ ಕರ್ನಾಟಕದ ಬೆಳಗಾವಿ ಮೂಲದ ಯೋಧ ಪ್ರವೀಣ ಪಟ್ಟಣಕುಡೆ (32) ಹುತಾತ್ಮರಾಗಿದ್ದಾರೆ.
ಯೋಧ ಪ್ರವೀಣ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮದವರಾಗಿದ್ದು, ನಾಳೆ ಸ್ವಗ್ರಾಮ ಚಂದೂರಿಗೆ ಪಾರ್ಥಿವ ಶರೀರ ಆಗಮಿಸಲಿದೆ ಎಂಬ ಮಾಹಿತಿ ಲಭಿಸಿದೆ. ಯೋಧ ಸಾವಿನ ಸುದ್ದಿ ಕೇಳುತ್ತಿದಂತೆ ಸ್ವಗ್ರಾಮ ನೀರವ ಮೌನ ಆವರಿಸಿದೆ.
71 ಆಮ್ರ್ಡ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಪ್ರವೀಣ್ ಅವರಿಗೆ ಮಾರ್ಚ್ 7 ರಂದು ಬುಲೆಟ್ ತಗುಲಿತ್ತು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ 8ರ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv