ಬೆಳಗಾವಿ: ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನಗರಾದ್ಯಂತ ಟ್ರಾಫಿಕ್ ಸಿಗ್ನಲ್ ಸ್ಥಗಿತಗೊಂಡಿದ್ದು, ವಾಹನ ಸವಾರರು ನಿಯಯ ಉಲ್ಲಂಘಿಸಿ ಮನಬಂದಂತೆ ವಾಹನ ಚಲಾಯಿಸಿ ಅಪಾಯಕ್ಕೆ ಮೂನ್ಸೂಚನೆ ನೀಡುತ್ತಿವೆ.
ವೇಗವಾಗಿ ಚಲಾಯಿಸುವವರಿಗೆ ಈ ಕಾಮಗಾರಿ ವಿಘ್ನವಾಗಿ ಪರಿಣಮಿಸುತ್ತಿದೆ. ಸಂಚಾರ ನಿಯಂತ್ರಿಸುವಲ್ಲಿ ಟ್ರಾಫಿಕ್ ಪೋಲಿಸ್ ಕೈತಪ್ಪುತ್ತಿದೆ. ನಗರದ ಪ್ರಮುಖ ರಸ್ತೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದರ ಬೆನ್ನಲ್ಲೇ ಟ್ರಾಫಿಕ್ ಸಿಗ್ನಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನೆಪದಲ್ಲಿ ಸವಾರರು ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದು ಇದರಿಂದ ಪಾದಚಾರಿಗಳಿಗೆ ಅಡಕವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಸ್ಥಿತಿ ಯಾರಿಗೂ ಹೇಳತೀರದ್ದಾಗಿದೆ.
Advertisement
ಮುಂಜಾನೆ 8ರಿಂದ 12 ರವರೆಗೆ ಅತಿ ಹೆಚ್ಚು ವಾಹನಗಳು ರಸ್ತೆಯಲ್ಲಿರುತ್ತವೆ. ಮತ್ತೆ ಸಂಜೆ 3 ರಿಂದ 8ರವರೆಗೆ ವಾಹನಗಳ ಹೆಚ್ಚು ಸಂಖ್ಯೆ ಹೆಚ್ಚುತ್ತವೆ. ಟ್ರಾಫಿಕ್ ಸಮಸ್ಯೆಯಿಂದಾಗಿ ಅಶೋಕ ವೃತ್ತ ಹಾಗೂ ಕೆಎಲ್ ಇ ಮಾರ್ಗದಲ್ಲಿ ಸಮಸ್ಯೆ ಉಟಾಗುತ್ತಿದೆ. ನಿತ್ಯವೂ ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿವೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ನಿರಂತರವಾಗಿ ಟ್ರಾಫಿಕ್ ನಿಯಂತ್ರಿಸುವ ಅನಿರ್ವಾಯವಿದೆ ಎನ್ನುತ್ತಾರೆ ವಾಹನ ಸವಾರರು. ಕೃಷ್ಣ ದೇವರಾಯ ವೃತ್ತದಿಂದ ಇಳಿಜಾರು ಇರುವ ಕಾರಣ ವಾಹನಗಳು ವೇಗವಾಗಿ ಬರುತ್ತವೆ. ಚನ್ನಮ್ಮ ವೃತ್ತದ ರಸ್ತೆ ದಾಟಲು ಪರದಾಡಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ರಸ್ತೆಯಲ್ಲಿ ಹಂಪ್‍ಗಳನ್ನೂ ನಿರ್ಮಿಸಿಲ್ಲ. ಮಕ್ಕಳನ್ನು ಕರೆದುಕೊಂಡು ರಸ್ತೆ ದಾಟಲು ಹೋದರೆ ಹೃದಯ ಕೈಗೆ ಬರುತ್ತದೆ ಎಂದು ಅಶೋಕ್ ಸದಾಶಿವ ನಗರದ ನಿವಾಸಿಯೊಬ್ಬರು ತಿಳಿಸಿದರು.
Advertisement
Advertisement
ತಪ್ಪಿದ ನಿಯಂತ್ರಣ: ರೈಲ್ವೆ ವ್ಯಾಪ್ತಿಯಲ್ಲಿರುವ ಅದೆಷ್ಟೂ ವಾಹನ ಈ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ಅಗತ್ಯವಿದೆ. ಇಲ್ಲಿಯೇ ಕಾಮಗಾರಿ ವಿಳಂಬದಿಂದ ರಸ್ತೆ ಉದ್ದಕ್ಕೂ ವಾಹನ ಸವಾರರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಎರಡೆರಡು ವಾಹನ ಒಂದೇ ಮಾರ್ಗ ಸಂಚರಿಸುವುದರಿಂದ ವಾಹನ ನಿಯಂತ್ರಣ ಹಳ್ಳಹಿಡಿಯುತ್ತಿದೆ.
Advertisement
ಕಾರ್ಯ ನಿರ್ವಹಿಸದ ಪೊಲೀಸ್: ಸಿಗ್ನಲ್ ಬಳಿಯಲ್ಲಿ ನೀಯೊಜಿಸಲಾದ ಟ್ರಾಫಿಕ್ ಪೊಲೀಸ್ ಕಾರ್ಯನಿರ್ವಸುತ್ತಿಲ್ಲ ಎನ್ನುವುದು ಪಾದಚಾರಿಗಳ ದೂರು. ಸಿಗ್ನಲ್ ಸ್ಥಗಿತಕೊಂಡರೆ ನಿಯಮ ಉಲ್ಲಂಘಿಸಿದ ಸವಾರರಿಗೆ ದಂಡ ಪಾವತಿಸಬೇಕು. ವೇಗವಾಗಿ ಸಂಚರಿಸುವ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಪೊಲೀಸ್ ಸಿಬ್ಬಂದಿ ಕಣ್ಮರೆಯಾದೊಡನೆ ವಾಹನ ಸವಾರರು ಸಿಗ್ನಲ್ ಉಲ್ಲಂಘಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಚಿಲ್ಲರೆ ವ್ಯಾಪಾರಿ, ಅವೈಜ್ಞಾನಿಕ ಆಟೋ ನಿಲ್ದಾಣಗಳಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಮತ್ತಷ್ಟೂ ಬಿಗಡಾಯಿಸುತ್ತಿದೆ. ಇದರಿಂದ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ಸಂಪೂರ್ಣವರೆಗೆ ಆಟೋ, ಚಿಲ್ಲರೆ ವ್ಯಾಪಾಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಈ ಹಾವಳಿ ತಲೆದೂರಿದೆ.
ಇಲ್ಲಿನ ರೈಲ್ವೇ ಮಾರ್ಗ, ಅಶೋಕ ವೃತ್ತ, ಅಂಬೇಡ್ಕರ್ ಮಾರ್ಗ ಕೃಷ್ಣದೇವರಾಯ ವೃತ್ತ, ಕೆಎಲ್‍ಇ ಮಾರ್ಗ, ಸದಾಶಿವ ನಗರ, ರಾಣಿ ಚನ್ನಮ್ಮ ವೃತ್ತ, ಕೇಂದ್ರ ಬಸ್ ನಿಲ್ದಾಣದ ರಸ್ತೆ ಹಾಗೂ ನಗರ ವಿವಿದ ಕಡೆಗೆ ಸಿಗ್ನಲ್ ಸಮಸ್ಯೆ ಎದುರಾಗುತ್ತಿದೆ.
ಪೊಲೀಸ್ ಸಿಬ್ಬಂದಿ ಹೈರಾಣ: ಸಿಗ್ನಲ್ ಸ್ಥಗಿತದಿಂದ ಟ್ರಾಫಿಕ್ ಬಳಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ದಂಡ ಹಾಕಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಕೋಟೆ ಕೆರೆ ಅಶೋಕ ವೃತ್ತ ಬಳಿ ಈ ಸಮಸ್ಯೆ ತಲೆದೂರಿದ್ದು, ನಿಯಮ ಉಲ್ಲಂಘಿಸಿ ವಾಹನ ಸಂಚರಿಸುತ್ತಿದ್ದು ಇದನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸ್ ಹೈರಾಣ ಆಗುತ್ತಿದ್ದಾರೆ.
ಕಾಮಗಾರಿಯಿಂದ ಸಿಗ್ನಲ್ ಸ್ಥಗಿತಗೊಂಡಿವೆ. ಇದರಿಂದ ವಾಹನ ಸವಾರರು ವೇಗವಾಗಿ ಸಂಚರಿಸುತ್ತಿದ್ದಾರೆ. ಈ ವೇಳೆಯಲ್ಲಿ ಪಾದಚಾರಿಗಳು ಸಂಚಾರಕ್ಕೆ ಅಡಕವಾಗುತ್ತಿದೆ. ಸಣ್ಣಪುಟ್ಟ ಅಪಘಾತ ಸಂಭವಿಸುವ ಮೂನ್ಸೂಚನೆ ಇದೆ ಪೊಲೀಸ್ ಸಿಬ್ಬಂದಿ ಆದಷ್ಟೂ ಟ್ರಾಫಿಕ್ ನಿಯಂತ್ರಸುವ ಕಾರ್ಯ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.