ಬೆಳಗಾವಿ: ಚಳಿಗಾಲದ ಅಧಿವೇಶನದ (Belagavi Session) 5ನೇ ದಿನವೂ ಪ್ರತಿಭಟನೆ ಕಾವು ಜೋರಾಗಿತ್ತು. ಇಂದು ಸಹ ಸುವರ್ಣ ವಿಧಾನಸೌಧ ಹೊರಗೆ 14 ವಿವಿಧ ಸಂಘಟನೆಗಳಿಂದ ಸಾಲು ಸಾಲು ಪ್ರತಿಭಟನೆ (Protest) ನಡೆದವು.
Advertisement
ಕರ್ನಾಟಕ ಪ್ರದೇಶ ಮಾದಿಗರ ಸಂಘದಿಂದ ಎಜೆ ಸದಾಶಿವ ಆಯೋಗದ ವರದಿ ಜಾರಿಗೆ ಪ್ರತಿಭಟನೆ ನಡೆಸಲಾಯಿತು. ಮಾರಣಹೊಳ ಗ್ರಾಮದ ರೈತರ 1,400 ಇನಾಮ ಜಮೀನು ರಕ್ಷಣೆಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪ್ರತಿಭಟನೆ ನಡೆಯಿತು. ಕಲಿಕಾ ಲೈಸೆನ್ಸ್ ಸೇರಿ ವಿವಿಧ ಬೇಡಿಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮೋಟಾರ್ ವಾಹನ ಚಾಲನಾ ತರಬೇತಿ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು. ಇದನ್ನೂ ಓದಿ: ಕುಮಾರಸ್ವಾಮಿ ಬಿಜೆಪಿಯವರಿಗೆ ಬಕೆಟ್ ಹಿಡಿಯಲು ಹೋಗಿದ್ದಾರೆ: ಸಿಎಂ ಇಬ್ರಾಹಿಂ
Advertisement
Advertisement
ಜಾತಿಗಣತಿಯನ್ನು ಬಹಿರಂಗಪಡಿಸಲು ಭೀಮ ಆರ್ಮಿ ಸಂಘಟನೆಯಿಂದ ಹೋರಾಟ, ಕಲಾವಿದರ ಮಾಶಾಸನ ಹೆಚ್ಚಳ, ಕಲಾವಿದರ ಅಕಾಡೆಮಿ ಸ್ಥಾಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಬೀದಿ ನಾಟಕಗಳ ಒಕ್ಕೂಟದಿಂದ ಹೋರಾಟ, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಸಂರಕ್ಷಣಾ ಸಂಸ್ಥೆಯಿಂದ ದೇವದಾಸಿಯರಿಗೆ ಪ್ರತಿ ತಿಂಗಳು 5 ಸಾವಿರ ರೂ. ಗೌರವಧನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ, ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಆಯಾಗಳ ಸಂಘದಿಂದ ಹೋರಾಟ, ಕಿತ್ತೂರು ಕೋಟೆ ಮರು ನಿರ್ಮಾಣಕ್ಕೆ ಒತ್ತಾಯಿಸಿ ರಾಣಿ ಚೆನ್ನಮ್ಮ ನವಭಾರತ ಸೇನೆಯಿಂದ ಮನವಿ ಸಲ್ಲಿಕೆ, ಕಡು ಬಡವರಿಗೆ ಆಶ್ರಯ ಮನೆ ಒದಿಸಲು ಒತ್ತಾಯಿಸಿ ಕರ್ನಾಟಕ ಬಡವರ ಹಿತರಕ್ಷಣಾ ವೇದಿಕೆಯಿಂದ ಮನವಿ ಸಲ್ಲಿಕೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿ 14 ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಇದನ್ನೂ ಓದಿ: ಲೀಲಾವತಿ ನಿಧನ: ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ದರ್ಶನಕ್ಕೆ ವ್ಯವಸ್ಥೆ