ಬೆಳಗಾವಿ: ಹೊಸ ವರ್ಷಕ್ಕೆ ನಂದಿನಿ ಹಾಲು, ಮೊಸರು (Nandini Milk, Curd) ದರ ಹೆಚ್ಚಾಗುವ ಸಾಧ್ಯತೆಯಿದೆ.
ಈ ಸಂಬಂಧ ಅಧಿವೇಶನದಲ್ಲಿ (Belagavi Session) ಸರ್ಕಾರ ದರ ಏರಿಸುವ ಸುಳಿವು ನೀಡಿದೆ. ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಸರ್ಕಾರ (Karnataka Government) ಹೇಳಿದೆ.
Advertisement
ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ ವೈ ನಂಜೇಗೌಡ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ ವೆಂಕಟೇಶ್ ಉತ್ತರ ನೀಡಿದ್ದಾರೆ. ಇತರೇ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!
Advertisement
Advertisement
ಒಂದು ವೇಳೆ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡರೆ ನಾಲ್ಕೇ ತಿಂಗಳ ಒಳಗಡೆ ಮತ್ತೊಮ್ಮೆ ಹಾಲಿನ ದರ ಏರಿಕೆಯಾಗಲಿದೆ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ
Advertisement
ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಈಗಾಗಲೇ ಚಿಂತನೆ ನಡೆಸಿದೆ. ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಸದ್ಯ ಚಿಂತನೆ ನಡೆದಿದ್ದು, ಸರ್ಕಾರ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆಯಿದೆ.
ಬೆಲೆ ಏರಿಕೆ ಯಾಕೆ?
ಆರ್ಥಿಕ ನಷ್ಟದ (Economic Loss) ಹಿನ್ನೆಲೆ ಈ ಹಿಂದೆ 5 ರೂ. ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ ಮನವಿ ಮಾಡಿತ್ತು. ಆದರೆ ಸರ್ಕಾರ ಅಕ್ಟೋಬರ್‌ನಲ್ಲಿ ಕೇವಲ 3 ರೂಪಾಯಿ ಮಾತ್ರ ಏರಿಕೆ ಮಾಡಿತ್ತು. ಈಗ 14 ಹಾಲು ಒಕ್ಕೂಟಗಳಿಂದ ಮನವಿ ಬಂದಲ್ಲಿ ಕೂಡಲೇ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ತಯಾರಿ ನಡೆಸುತ್ತಿದೆ.
ಕಳೆದ ಬಾರಿ 3 ರೂ. ನೇರವಾಗಿ ರೈತರಿಗೆ ನೀಡಿದ ಹಿನ್ನೆಲೆ ಒಕ್ಕೂಟಗಳಿಗೆ ನಷ್ಟದ ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎನ್ನುತ್ತಿದ್ದಾರೆ ಕೆಎಂಎಫ್ ಅಧಿಕಾರಿಗಳು. ಸದ್ಯ ಜನವರಿಯಲ್ಲಿ ಒಕ್ಕೂಟಗಳ ಸಭೆ ಕರೆದು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ಕೆಎಂಎಫ್ ಚಿಂತನೆ ನಡೆಸಿದೆ.