ಬೆಳಗಾವಿ: ವೈದ್ಯರ ಕೆಂಗಣ್ಣಿಗೆ ಗುರಿಯಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆಯನ್ನು ಆರೋಗ್ಯ ಸಚಿವ ರಮೇಶ್ ಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಪರಿಷತ್‍ನಲ್ಲಿ ಹೇಳಿಕೆ ನೀಡಿದ ರಮೇಶ್ ಕುಮಾರ್, ವಿಧೇಯಕದ ಬಗ್ಗೆ ಭಾವುಕರಾಗಿ ಮಾತನಾಡಿ ಕಣ್ಣೀರಿಟ್ಟರು. ರೋಗಿಗಳ ಸಾವಿನಿಂದ ಕಳೆದ ರಾತ್ರಿ ನಾನು ನಿದ್ರೆಯೇ ಮಾಡಿಲ್ಲ ಎಂದು ಪರಿತಪಿಸಿದರು.
Advertisement
ಈಶ್ವರಪ್ಪ ನನ್ನ ಕೊಲೆಗುಡುಕ ಅಂತ ಹೇಳಿದ್ದಾರೆ. ನಾನು ಎಷ್ಟು ಕೊಲೆ ಮಾಡಿದ್ದೇನೆ. ನನ್ನ ವಿರುದ್ಧ ಎಷ್ಟು ಕೇಸು ದಾಖಲಾಗಿದೆ ಅನ್ನೋದನ್ನು ತಿಳಿಸಿ ಅಂತ ತಿರುಗೇಟು ನೀಡಿದರು. ವಿದೇಶದಲ್ಲಿರೋ ನನ್ನ ಮಗ ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿ ನಿಮ್ಮಿಂದ ನಾನು ಬದುಕಲು ಸಾಧ್ಯವಾಗುತ್ತಿಲ್ಲ. ನಿನ್ನ ದಾರಿ ನೀನು ನೋಡಿಕೋ ಅಂತ ಹೇಳಿದ ಅಂತ ರಮೇಶ್ ಕುಮಾರ್ ಕಣ್ಣೀರು ಸುರಿಸಿದ್ರು.
Advertisement
ನಾನು ಶಿರಡಿ ಸತ್ಯಬಾಬಾ ಭಕ್ತ. ಬೆಂಗಳೂರು ವೈಟ್ ಫೀಲ್ಡ್ ನ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಅಲ್ಲಿನ ಸ್ವಾಮೀಜಿ ಒಬ್ಬರು ನಾನೇ ಉಚಿತವಾಗಿ ಚಿಕಿತ್ಸೆ ನೀಡುವಾಗ ನಿಮಗೇನು ಆಗಿದೆ ಎಂದು ಹಿಂದೆ ನನ್ನನ್ನು ಪ್ರಶ್ನೆ ಮಾಡಿದ್ದರು. ಇದರಿಂದ ನಾನು ಪ್ರಭಾವಿತನಾಗಿ ತಿದ್ದುಪಡಿ ಮಸೂದೆಯನ್ನು ತಂದಿದ್ದೇನೆ. ನಾನು ದೇವರಾಜ್ ಅರಸರ ಗರಡಿಯಲ್ಲಿ ಬೆಳೆದಿದ್ದೇನೆ. ಅವರು ಕೆಲ ಆದರ್ಶಗಳು ನನ್ನಲ್ಲೇ ಬಿಟ್ಟು ಹೋಗಿದ್ದಾರೆ. ಅವರ ಹಾದಿಯಲ್ಲೆ ನಾನು ನಡೆಯುತ್ತಿದ್ದೇನೆ ಎಂದು ಭಾವುಕರಾಗಿ ಮಾತನಾಡಿದರು.
Advertisement
Advertisement
ಮೂಲಗಳ ಪ್ರಕಾರ, ಮಸೂದೆ ಮಂಡನೆಗೆ ಸಂಪುಟದ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಮಸೂದೆ ಮಂಡನೆಯಾಗದೇ ಇದ್ದರೆ ರಾಜೀನಾಮೆ ನೀಡುವುದಾಗಿ ಸಚಿವ ರಮೇಶ್ ಕುಮಾರ್ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕಾರಣವಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಪರಿಶೀಲನೆಯ ಕೆ.ಎನ್. ರಾಜಣ್ಣ ಅಧ್ಯಕ್ಷತೆಯ ಜಂಟಿ ಸದನ ಸಮಿತಿ ತನ್ನ ಪರಿಶೀಲನಾ ವರದಿಯನ್ನ ವಿಧಾನಸಭೆಯಲ್ಲಿ ಮಂಡಿಸಿದೆ. ವರದಿಯಲ್ಲಿ ಖಾಸಗಿ ವೈದ್ಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿದ್ದು, ಹಿಂದೆ ವಿಧೇಯಕದಲ್ಲಿದ್ದ ಜೈಲು ಶಿಕ್ಷೆಯನ್ನ ಕೈಬಿಡಲಾಗಿದ್ದು, ದಂಡದ ಪ್ರಮಾಣವನ್ನೂ ಇಳಿಕೆ ಮಾಡಲಾಗಿದೆ. ಜೊತೆಗೆ, ಏಕರೂಪ ದರ ತೆಗೆದು ಹಾಕಲಾಗಿದೆ. ಸರ್ಕಾರವೇ ಹಣ ಪಾವತಿಸಲಿದೆ.
ಪರಿಶೀಲನಾ ಸಮಿತಿಯ ವರದಿಯಲ್ಲಿ ಏನಿದೆ?
ಖಾಸಗಿ ಆಸ್ಪತ್ರೆಗಳಿಗೆ ವಿಧಿಸಲು ಮುಂದಾಗಿದ್ದ ಏಕರೂಪ ದರ ಇಲ್ಲ. ಸರ್ಕಾರ ನಿಗದಿ ಪಡಿಸಿದ ದರ ಪಟ್ಟಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಜೈಲು ಶಿಕ್ಷೆ ಇಲ್ಲ. ಬದಲಿಗೆ ದಂಡದ ಮೊತ್ತವನ್ನು 5 ಲಕ್ಷದಿಂದ 1 ಲಕ್ಷ ರೂ.ಗೆ ಇಳಿಸಲಾಗಿದೆ.
ರೋಗಿ ಸಾವನ್ನಪಿದ್ರೆ ಸಂಬಂಧಿಕರು ಬಾಕಿ ಹಣ ಪಾವತಿ ಮಾಡಲು ವಿಫಲವಾದರೆ ಸರ್ಕಾರವೇ ವಿವಿಧ ಯೋಜನೆಗಳಡಿ ಹಣ ಪಾವತಿಸಬೇಕು. ವೈದ್ಯಕೀಯ ಸಂಸ್ಥೆಗಳು ಆನ್‍ಲೈನ್ ಜತೆಗೆ ಅರ್ಜಿ ಮೂಲಕವೂ ನೋಂದಣಿಗೆ ಅರ್ಜಿ ಸಲ್ಲಿಸಬಹುದು. 90 ದಿನಗಳಲ್ಲಿ ಅರ್ಜಿ ಇತ್ಯರ್ಥ ಆಗಬೇಕು.
ಖಾಸಗಿ ಆಸ್ಪತ್ರೆಗಳು ಇರುವ ಸ್ಥಳ, ಅವುಗಳ ಗ್ರೇಡ್ ಆಧಾರದ ಮೇಲೆ ವರ್ಗೀಕರಣ ಮಾಡಿ ದಿ ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ ರೂಲ್ಸ್ 2012ರ ಅನ್ವಯ ದರ ನಿಗದಿ. ದರದ ಬಗ್ಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದ್ದು, ಸರ್ಕಾರಿ ಆಸ್ಪತ್ರೆಗಳು ಇರುವ ಜಾಗದಿಂದ 200 ಮೀಟರ್ ಒಳಗಡ ವೈದ್ಯಕೀಯ ರೋಗ ಪತ್ತೆ ಪ್ರಯೋಗಾಲಯಗಳು ಇರಬಹುದು.
5 ವರ್ಷಕ್ಕೆ 1 ಬಾರಿ ನೋಂದಣಿ ನವೀಕರಣ ಮಾಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರು ಬಗ್ಗೆ ವಿಚಾರಣೆ ನಡೆಸಲು ಕುಂದುಕೊರತೆ ಪರಿಹಾರಗಳ ಸಮಿತಿ ರಚನೆಗೆ ಅಪರ ಜಿಲ್ಲಾಧಿಕಾರಿ ಅಥವಾ ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆಗೆ ಶಿಫಾರಸು.