ಬೆಳಗಾವಿ | ಅಪರಾಧ ಕೃತ್ಯಗಳು ಕಡಿಮೆಯಾಗಲೆಂದು ಪೊಲೀಸರಿಂದ ರಣಚಂಡಿಕಾ ಹೋಮ

Public TV
1 Min Read
Belagavi Police Station

ಬೆಳಗಾವಿ: ಅಪರಾಧ ಕೃತ್ಯಗಳು ಕಡಿಮೆ ಆಗಲಿ ಎಂದು ಬೆಳಗಾವಿ ನಗರ ಪೊಲೀಸರು ಹೋಮ ಹವನದ ಮೊರೆ ಹೋಗಿರುವ ವಿಶೇಷ ಪ್ರಸಂಗವೊಂದು ಕಂಡುಬಂದಿದೆ.

ಬೆಳಗಾವಿ (Belagavi) ನಗರದ ಮಾಳಮಾರುತಿ ಠಾಣಾ ಪೊಲೀಸರು (Malmaruti Police Station) ಅಪರಾಧ ಚಟುವಟಿಕೆ ಕಡಿಮೆ ಆಗಬೇಕು, ಠಾಣೆಯಲ್ಲಿ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ರಣಚಂಡಿಕಾ ಹೋಮ ನೆರವೇಸಿರಿದ್ದಾರೆ.ಇದನ್ನೂ ಓದಿ: ಹಾಸನದಲ್ಲಿ ಹಮ್ಮಿಕೊಂಡಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದ ವಿರುದ್ಧ ಎಐಸಿಸಿಗೆ ದೂರು

ಪೊಲೀಸ್ ಠಾಣೆಯ ಹಾಲ್‌ನಲ್ಲಿ ಹೋಮ ಹವನ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಠಾಣೆಯ ಬಾಗಿಲಿಗೆ ಬೂದಗುಂಬಳಕಾಯಿ ಒಡೆದು, ಅರಿಶಿನ ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ. ಇಡೀ ಠಾಣೆಯಲ್ಲಿ ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

Belagavi Police Staion

ಕಳೆದ ಒಂದೂವರೆ ತಿಂಗಳಲ್ಲಿ ಅತಿ ಹೆಚ್ಚು ಅಪರಾಧಗಳು ಪ್ರಕರಣಗಳು ಈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿವೆ. ಕಳೆದ ವಾರ ಮಹಿಳೆಯೊಬ್ಬರನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಅಮಾನವೀಯ ಘಟನೆಯೂ ನಡೆದಿತ್ತು. ಎರಡು ದಿನಗಳ ಹಿಂದೆಯಷ್ಟೇ ಪ್ರೀತಿಗಾಗಿ ಗುಂಡಿನ ಸದ್ದು ಕೇಳಿ ಬಂದಿತ್ತು. ಕೊಲೆ, ಸುಲಿಗೆ, ದರೋಡೆ, ಕಳ್ಳತನ ಸೇರಿ ಸುಮಾರು 45ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಕ್ರೈಂ ಕಂಟ್ರೋಲ್‌ಗೆ ಸಾಕಷ್ಟು ಪ್ರಯತ್ನ ಮಾಡಿದರೂ ಏನು ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆ ಠಾಣಾಧಿಕಾರಿ ಜೆ.ಎಮ್ ಖಾಲಿಮಿರ್ಚಿ ಅವರು ಇದೀಗ ದೇವರ ಮೊರೆ ಹೋಗಿದ್ದಾರೆ. ಇದು ಪೊಲೀಸರೇ ಮೂಢನಂಬಿಕೆ, ಮೌಢ್ಯಕ್ಕೆ ಶರಣಾಗಿದ್ದು ಪರ ವಿರೋಧ ಚರ್ಚೆಗೆ ಆಸ್ಪದ ನೀಡಿದೆ.ಇದನ್ನೂ ಓದಿ: ಓವರ್‌ಟೆಕ್ ಮಾಡಲು ಹೋಗಿ ಬೈಕ್‌ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

Share This Article