ಚರಂಡಿಯಲ್ಲಿ ಕಲ್ಲಂಗಡಿ ಹಣ್ಣು ತೊಳೆದು ಮಾರುತ್ತಿದ್ದ ಇಬ್ಬರ ಬಂಧನ

Public TV
1 Min Read
CKD Arrest

ಚಿಕ್ಕೋಡಿ (ಬೆಳಗಾವಿ): ಚರಂಡಿಯಲ್ಲಿ ಕಲ್ಲಂಗಡಿ ಹಣ್ಣುಗಳನ್ನ ತೊಳೆದು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಬಸವೇಶ್ಚರ ಚೌಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಿಪ್ಪಾಣಿ ಪಟ್ಟಣದ ಭೋಪಳೆ ಗಲ್ಲಿಯ ಶಾಬಾಜ್ ಮುನ್ನಾ ಸತಾರಿ (20) ಹಾಗೂ ರಿಯಾನ್ ಆಯಾಜ್ ಮಡ್ಡೆ (19) ಬಂಧಿತರು. ಈ ಯುವಕರು ಕಲ್ಲಂಗಡಿ ಹಣ್ಣುಗಳನ್ನ ಚರಂಡಿಯಲ್ಲಿ ತೊಳೆದು ಮಾರಾಟ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

CKD Arrest A

ವಿಡಿಯೋವನ್ನು ನೋಡಿದ್ದ ನಿಪ್ಪಾಣಿಯ ಕೆಲವರು ಆರೋಪಿಗಳನ್ನು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳು ಈ ಕೃತ್ಯವನ್ನು ಮಾರ್ಚ್ 28ರಂದು ಎಸಗಿದ್ದು, ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಬಸವೇಶ್ವರ ಚೌಕ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿ ಹಿಂಡಲಗಾ ಜೈಲಿಗೆ ಕಳಿಸಿದ್ದಾರೆ.

Nippani Police Station

Share This Article
Leave a Comment

Leave a Reply

Your email address will not be published. Required fields are marked *