ಬೆಳಗಾವಿ: ಸಮಾಜದಲ್ಲಿ ಕೆಲವೊಂದಿಷ್ಟು ಕಾಮೆಂಟ್ ಕಲಿವೀರರು ಹುಟ್ಟಿಕೊಂಡಿದ್ದಾರೆ ಎಂದು ನಟ ವಸಿಷ್ಠ ಸಿಂಹ (Vasishta Simha), ಸಾಮಾಜಿಕ ಜಾಲತಾಣದಲ್ಲಿ (Social Media) ಕೆಟ್ಟ ಕಾಮೆಂಟ್ ಮಾಡುವವರಿಗೆ ಚಾಟಿ ಬೀಸಿದ್ದಾರೆ.
ಬೆಳಗಾವಿ (Belagavi) ಸರ್ದಾರ ಮೈದಾನದಲ್ಲಿ ಆಯೋಜನೆ ಉತ್ಸವದಲ್ಲಿ ಮಾತನಾಡಿದ ಅವರು, ಫೇಸ್‌ಬುಕ್ ಅಭಿಮಾನಿಗಳ ಅತಿರೇಕದ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ, ಕೈಲಾದಷ್ಟು ಒಳ್ಳೆಯದನ್ನು ಹಂಚಿಕೊಳ್ಳಿ. ಕೆಟ್ಟ ವಿಷಯಗಳನ್ನ ಹಂಚೋದು ಬೇಡ. ಇವತ್ತಿನ ಸಮಾಜದಲ್ಲಿ ಕೆಲವೊಂದಿಷ್ಟು ಜನ ಕಾಮೆಂಟ್ ಕಲಿವೀರರು ಹುಟ್ಟಿಕೊಂಡಿದಾರೆ. ಅಂತವರು ನಿಮ್ಮ ಗಮನಕ್ಕೆ ಬಂದರೆ ತಡೆಯಿರಿ ಎಂದು ಕರೆಕೊಟ್ಟಿದ್ದಾರೆ. ಇದನ್ನೂ ಓದಿ: ಮಗಳ ಬಗ್ಗೆ ಕೆಟ್ಟ ಕಾಮೆಂಟ್ಸ್ – ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್ ವೇಸ್ಟ್ ಮಾಡಲ್ಲ ಎಂದ ಕಿಚ್ಚ ಸುದೀಪ್
ಬೇರೆಯವರ ಖಾತೆಗೆ ಹೋಗಿ ಅನಗತ್ಯವಾಗಿ ಮಾತಾಡೋದು ಬರೆಯೋದು, ಶೌರ್ಯ ಮೆರೆಯೋದು ಯಾರು ಮಾಡೋದು ಬೇಡಾ. ಇನ್ನೊಬ್ಬರನ್ನು ಕೆಣಕಿ, ಕಾಡಿ ಪೀಡಿಸಿ ಬದುಕೋದು ಸಂತೋಷ ಅಲ್ಲ ಅದೊಂದು ವಿಕೃತಿ ಎಂದಿದ್ದಾರೆ.
ಬೆಳಗಾವಿ ಗಡಿ ಭಾಗ ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿರುವ ಸವಾಲುಗಳು ಹತ್ತು ಹಲವು, ಅದೆಲ್ಲದಕ್ಕೆ ಎದೆಗೊಟ್ಟು ಕನ್ನಡ ಬೆಳೆಸುವ ಕೆಲಸ ಮಾಡುತ್ತಿದದೀರಿ. ಅಭಿಮಾನ ಅಂದ್ರೇ ಇದು, ಭಾಷೆ ಅಂದ್ರೇ ಇದು ಕನ್ನಡ ಬಳಸಿದರೆ ಸಾಕು ಕನ್ನಡ ಅಜರಾಮವಾಗಿ ಉಳಿಯುತ್ತದೆ ಎಂದಿದ್ದಾರೆ.
ನಮ್ಮ ಸಮಾಜದಲ್ಲಿ ವಿಕೃತಿ ಇರೋದು ಬೇಡ. ಒಳ್ಳೆಯದನ್ನು ಮಾಡಿದ್ದಕ್ಕೆ ನಮ್ಮ ಹಿರಿಯರನ್ನು ನಾವು ಕೊಂಡಾಡುತ್ತೇವೆ ಎಂದರು. ಇದೇ ವೇಳೆ ಅಅವರು ಅಭಿಮಾನಿಗಳ ಮುಂದೆ ಹಾಡು ಹಾಡಿ ರಂಜಿಸಿದ್ದಾರೆ. ಇದನ್ನೂ ಓದಿ: ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಾಮೆಂಟ್ – ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರಿಂದ 3 ವಿಶೇಷ ತಂಡ

