ಚಿಕ್ಕೋಡಿ: ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಕೋತಿಯೊಂದು ನಮಸ್ಕರಿಸಿ ಅಪರೂಪದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಇಂದು ನಡೆದಿದೆ.
ತುಕ್ಕಾನಟ್ಟಿ ಗ್ರಾಮದ ಆಕಾಶ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಇಂದು ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬಾಗೇವಾಡಿ ಭಾಷಣ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಕೋತಿಯೊಂದು ಸ್ವಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಮುಂದೆ ಕುಳಿತುಕೊಂಡಿತ್ತು. ಇದನ್ನೂ ಓದಿ: ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ
Advertisement
Advertisement
ಕೋತಿಯನ್ನು ಗಮನಿಸಿದ ಶಿಕ್ಷಕ, ಶಿಕ್ಷಕಿಯರು ಅಚ್ಚರಿಗೊಂಡಿದ್ದರು. ಕೋತಿ ಮಾತ್ರ ಸಾವಿತ್ರಿಬಾಯಿ ಫುಲೆ ಅವರ ಭಾವ ಚಿತ್ರದ ಮುಂದೆ ಕೆಲ ಹೊತ್ತು ಕುಳಿತು ನಮಸ್ಕರಿಸಿ, ಪ್ರಸಾದ ತಿಂದು ಅಲ್ಲಿಂದ ಹೊರಟು ಹೋಯಿತು. ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಆಚರಿಸಿದ ಸಾವಿತ್ರಿಬಾಯಿ ಫುಲೆ ಜಯಂತಿಗೆ ಕೋತಿ ಬಂದು ಗೌರವ ಸಲ್ಲಿಸಿದ್ದು ವಿಶೇಷವಾಗಿದೆ.