ಬೆಳಗಾವಿ: ಜಿಲ್ಲೆಯ ಅರಸಗಿ ಗ್ರಾಮದಲ್ಲಿ ಮಂಗವೊಂದು ಜನರ ನೆಮ್ಮದಿಯನ್ನು ಹಾಳು ಮಾಡಿದೆ. ಗ್ರಾಮದಲ್ಲಿ ಟ್ರ್ಯಾಕ್ಟರ್ ಶಬ್ದ ಕೇಳಿದ್ರೆ ಸಾಕು ಪ್ರತ್ಯಕ್ಷವಾಗುವ ಮಂಗ ಕಳೆದ 6 ತಿಂಗಳಿಂದ ಸುಮಾರು 80ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.
ಇತ್ತೀಚಿಗಷ್ಟೆ ಟ್ರ್ಯಾಕ್ಟರ್‍ನಲ್ಲಿ ಸುರಕ್ಷತೆಗಾಗಿ ಕಟ್ಟಿಗೆ ತೆಗೆದುಕೊಂಡು ಹೋಗ್ತಿದ್ದ ರೈತನ ಮೇಲೂ ಮಂಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾದ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದಾಗಿ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನು ಕೆಲಸಕ್ಕಾಗಿ ಹೊರಬರಲೇಬೇಕಾದ ಜನರು ಕೈಯಲ್ಲಿ ಕೋಲು ಹಿಡಿದುಕೊಂಡು ಓಡಾಡುವಂತಾಗಿದೆ.
ಮಂಗನ ಕೀಟಲೆಯಿಂದ ತತ್ತರಿಸಿ ಹೋಗಿರುವ ಗ್ರಾಮಸ್ಥರು ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ರೆ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಮಂಗನ ಸೆರೆಗೆ ಎಷ್ಟೇ ಪ್ರಯತ್ನಿಸಿದ್ರೂ ಮಂಗ ಮಾತ್ರ ಕೈಗೆ ಸಿಕ್ಕಿಲ್ಲ. ಮಂಗನ ಹಾವಳಿಯಿಂದ ಅಗಸಗಿ ಗ್ರಾಮದ ಜನರು ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ.