ಬೆಳಗಾವಿ: ಮಹಿಳೆಯ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಖತ್ ಗೂಸಾ ನೀಡಿದ ಘಟನೆ ಜಿಲ್ಲೆಯ ಸವದತ್ತಿ ಪಟ್ಟಣದ ಅರಳಿಗಿಡ ಓಣಿಯಲ್ಲಿ ನಡೆದಿದೆ.
ಪಟ್ಟಣದ ಅರಳಿಗಿಡ ಓಣಿಯಲ್ಲಿ ಆರೋಪಿ ದಾವಲ್ ಉಸ್ತಾದ ಎಂಬಾತ ಮದ್ಯಪಾನ ಮಾಡಿ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದ. ಇದನ್ನ ಗಮನಿಸಿದ ಮಹಿಳೆಯರು ಮತ್ತು ಸ್ಥಳೀಯರು ಸೇರಿ ದಾವಲ್‍ಗೆ ಥಳಿಸಿದ್ದಾರೆ.
Advertisement
ಅಲ್ಲದೇ ದಾವಲ್ ನನ್ನು ಪಟ್ಟಣದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸವದತ್ತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.