ಬೆಳಗಾವಿ(ಚಿಕ್ಕೋಡಿ): ಮುಖ್ಯಮಂತ್ರಿ ಬಿಎಸ್‍ವೈ ಸರ್ಕಾರ ಸೇಫ್ ಆಗಲು ಬೈ ಎಲೆಕ್ಷನ್‍ನಲ್ಲಿ 10ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಗೆಲ್ಲಬೇಕಿರುವ ಅನಿವಾರ್ಯತೆ ಇದೆ. ಹೀಗಾಗಿ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಅವರನ್ನ ಗೆಲ್ಲಿಸಲು ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
Advertisement
ಕಾಗವಾಡ ಮತಕ್ಷೇತ್ರದಲ್ಲಿ ಬೈ ಎಲೆಕ್ಷನ್ ಕಾವು ರಂಗೇರಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅನುಭವಿ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹಾಗಾಗಿ ಲಿಂಗಾಯತರೇ ಹೆಚ್ಚಿರುವ ಕಾಗವಾಡ ಕ್ಷೇತ್ರದಲ್ಲಿ ಸಿಎಂ 2 ದಿನಗಳ ವಾಸ್ತವ್ಯ ಹೂಡಿದ್ದಾರೆ. ಮರಾಠಾ ಸಮುದಾಯಕ್ಕೆ ಸೇರಿರುವ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಪರ ಲಿಂಗಾಯತ ಮತ ಸೆಳೆಯಲು ಕ್ಷೇತ್ರದಲ್ಲಿ 2 ಸಮಾವೇಶ ಕೈಗೊಂಡಿದ್ದಾರೆ. ಜೊತೆಗೆ ಶ್ರೀಮಂತ ಪಾಟೀಲ್ ಒಡೆತನದ ಕೆಂಪವಾಡ ಸಕ್ಕರೆ ಕಾರ್ಖಾನೆಯಲ್ಲಿ ವಾಸ್ತವ್ಯ ಹೂಡಿ ಲಿಂಗಾಯತ ಮುಖಂಡರ ಜೊತೆಗೆ ಸಭೆ ಮಾಡಲಿದ್ದಾರೆ.
Advertisement
Advertisement
ಕಳೆದ ಬಾರಿ ಲಿಂಗಾಯತರು ನನಗೆ ಕೈಕೊಟ್ಟಿದ್ದರು. ಆದರೆ ಈ ಬಾರಿ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಅಂತ ರಾಜು ಕಾಗೆ ಹೇಳಿದ್ದಾರೆ. ಕಾಂಗ್ರೆಸ್ಸಿನಿಂದ ಹಾರಿ ಬಿಜೆಪಿಗೆ ಬಂದಿರುವ ಶ್ರೀಮಂತ್ ಪಾಟೀಲ್ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ. ನನಗೆ 30 ವರ್ಷದ ರಾಜಕೀಯ ಅನುಭವಿದೆ ಹೀಗಾಗಿ ಗೆಲುವು ನನ್ನದೇ ಎನ್ನುವ ಅತಿಯಾದ ವಿಶ್ವಾಸದಲ್ಲಿದಾರೆ.
Advertisement
ಲಿಂಗಾಯತರು ಪ್ರಬಲರಾಗಿರುವ ಕಾಗವಾಡ ಮತಕ್ಷೇತ್ರದಲ್ಲಿ ಲಿಂಗಾಯತ ಟ್ರಂಪ್ ಕಾರ್ಡ್ ಪ್ಲೇ ಮಾಡಲಿದ್ದಾರೆ. ಇದು ವರ್ಕ್‍ಔಟ್ ಆಗುತ್ತಾ ಕಾದು ನೋಡಬೇಕಿದೆ.