ಬೆಳಗಾವಿಯಿಂದ ಇಂದೋರ್, ಅಜ್ಮೀರ್‌ಗೆ ಮತ್ತೊಂದು ವಿಮಾನ ಹಾರಾಟ

Public TV
1 Min Read
11 1

ಬೆಳಗಾವಿ: ರಾಷ್ಟ್ರೀಯ ವಿಮಾನ ಹಾರಾಟಗಳಲ್ಲಿ ಒಂದಾದ ಸ್ಟಾರ್ ಏರ್ ಬೆಳಗಾವಿ, ಇಂದೋರ್‍ನಿಂದ ಅಜ್ಮೀರ್ ಕಿಶನ್‍ಘಡಿಗೆ ಅಧಿಕೃತವಾಗಿ ಸೋಮವಾರ ತನ್ನ ಹಾರಾಟವನ್ನು ಪ್ರಾರಂಭಿಸಿದೆ.

ಸೋಮವಾರ, ಮಂಗಳವಾರ ಮತ್ತು ಗುರುವಾರ ಎರಡೂ ಕಡೆಯಿಂದ ಹಾರಾಟ ನಡೆಯಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಇಂದೋರ್‍ಗೆ ಮತ್ತು ನಂತರ ಕಿಶನ್‍ಘಡಿಗೆ ಹಾರಾಟ ನಡೆಸುತ್ತದೆ. ಸೋಮವಾರ ಈ ಮಾರ್ಗದಿಂದ ಚಾಲನೆ ನೀಡಲಾಗಿದೆ.

ಬೆಳಗಾವಿ ಪ್ರಯಾಣಿಕರು ಕಿಶನ್‍ಗಡಿ ಮದ್ಯದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಉಡಾನ್ 3ರ ಅಡಿಯಲ್ಲಿ ಸ್ಟಾರ್ ಏರ್‍ಗೆ ನೀಡಲಾಗಿರುವ ಯೋಜನೆಯಿಂದ ಬೆಳಗಾವಿಯಿಂದ ಅದೆಷ್ಟೂ ಪ್ರಯಾಣಿಕರು ರಾಜಸ್ಥಾನ ಪ್ರವಾಸ ಕೈಗೊಳ್ಳ ಅನುಕೂಲವಾಗಿದೆ. ಬೆಳಗಾವಿಯಿಂದ 1550 ಕಿಲೋಮೀಟರ್ ಅಂತರವಿರುವ ಕಿಶನ್‍ಘಡಿಗೆ ವೇಗವಾಗಿ ಸಂಚರಿಸಲು ನೇರ ವಿಮಾನ ಸೇವೆ ಲಭ್ಯವಿರಲಿಲ್ಲ. ಇದರಿಂದ ತುಂಬಾ ಅನುಕೂಲವಾಗಿದೆ ಪ್ರಯಾಣಿಕರ ಮನದಾಳ ಮಾತಾಗಿದೆ.

ಇಂದೋರ್ ಮತ್ತು ಕಿಶನ್‍ಘಡ ನಡುವಿನ ಸಂಚಾರ 550 ಕಿಲೋಮೀಟರ್ ಮತ್ತು ಜನರು ಇಂದೋರ್‍ನಿಂದ ರಸ್ತೆ ಮೂಲಕ ಕಿಶನ್‍ಘಡ ತಲುಪಲು 10 ಗಂಟೆಗಳಿಗಿಂತ ಹೆಚ್ಚು ಸಮಯಕ್ಕೆ ಸದ್ಯ ವಿಮಾನಯಾನ ಹಾರಾಟ ಮೂಲಕ ಮುಕ್ತಿ ಸಿಕ್ಕಂತಾಗಿದೆ.

ಈಗಾಗಲೇ ಬೆಳಗಾವಿಯಿಂದ ಇಂದೋರ್‍ಗೆ ನೇರ ವಿಮಾನ ಹಾರಾಟವಿದೆ ಮತ್ತೊಂದು ಮಾರ್ಗವಾಗಿ ರಾಜಸ್ಥಾನದವರೆಗೆ ‘ದಿ ಲ್ಯಾಂಡ್ ಆಫ್ ಕಲರ್ಸ್’ ವರೆಗೆ ವಿಸ್ತರಿಸಲಿದೆ ಎನ್ನಲಾಗಿದೆ.

Share This Article