ಬೆಳಗಾವಿ: ಯುವಕರು, ವೃದ್ಧರು ಎಂಬ ಬೇಧವಿದ್ದದೆ ಎಲ್ಲರೂ ಟಿಕ್‍ಟಾಕ್ ವಿಡಿಯೋ ಮಾಡವುದು ಒಂದು ರೀತಿ ಟ್ರೆಂಡ್ ಆಗಿಬಿಟ್ಟಿದೆ. ಹಾಗೆಯೇ ಬೈಲಹೊಂಗಲದ ಅಜ್ಜಿಯೊಬ್ಬರು ಟಿಕ್‍ಟಾಕ್ ವಿಡಿಯೋ ಮಾಡುವುದರ ಮೂಲಕ ಸಖತ್ ಫೇಮಸ್ ಆಗಿಬಿಟ್ಟಿದ್ದಾರೆ.
ಯುವಕರು ನಾಚಿಸುವಂತೆ ಟಿಕ್‍ಟಾಕ್ ಮಾಡಿ ಬೈಲಹೊಂಗಲದ ವಕ್ಕುಂದ ಗ್ರಾಮದ ರುಕ್ಮವ್ವ(95) ಭಾರೀ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುಕ್ಕವ್ವ ಅವರ ಟಿಕ್‍ಟಾಕ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ ಟಿಕ್‍ಟಾಕ್ ವಿಡಿಯೋಗಳಲ್ಲಿ ಅಜ್ಜಿಗೆ ಸಾಥ್ ನೀಡಿದ ಇಬ್ಬರೂ ಯುವಕರು ಕೂಡ ನೋಡುಗರ ಮೆಚ್ಚುಗೆ ಗಳಿಸಿದ್ದಾರೆ.
ಟಿಕ್‍ಟಾಕ್‍ನಲ್ಲಿ ಅವರ ವಿಡಿಯೋ ಅಂದರೆ ಸಾಕು ಸಾವಿರಾರು ಲೈಕ್ಸ್, ಕಮೆಂಟ್ಸ್ ಬರುತ್ತಿದೆ. ಸಾಕಷ್ಟು ಮಂದಿ ಇವರ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಈಗ ಫೇಸ್‍ಬುಕ್ ಖಾತೆ ಇಲ್ಲದೆ ಇದ್ದರೂ ಪರವಾಗಿಲ್ಲ, ಟಿಕ್‍ಟಾಕ್ ಖಾತೆ ಮಾತ್ರ ತೆರದಿರಲೇಬೇಕು ಎನ್ನುವಂತಹ ಸ್ಥಿತಿ ಬಂದಿದೆ. ಯುವಕರಿಂದ ಇಳಿವಯಸ್ಸಿನವರೂ ಸಾಮಾಜಿಕ ಜಾಲತಾಣದಲ್ಲಿ, ಟಿಕ್‍ಟಾಕ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಅದರಲ್ಲೂ ರುಕ್ಕವ್ವ ಅಜ್ಜಿ ಈಗ ಟಿಕ್‍ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ವಕ್ಕುಂದ ಗ್ರಾಮದ ನೇಕಾರಗಲ್ಲಿಯಲ್ಲಿ ಫಕ್ಕಿರಪ್ಪ ಕಾಂಬಳೆ, ಮಂಜುನಾಥ ಬುಚಡಿ ಚಕ್ಕುಂದ ಮತ್ತು ಮಾರುತಿ ಬುಚಡಿ ಅವರು ಟಿಕ್‍ಟಾಕ್‍ನಲ್ಲಿ ಫುಲ್ ಫೇಮಸ್ ಆಗುತ್ತಿದ್ದು, ಪಕ್ಕಾ ಉತ್ತರ ಕರ್ನಾಟಕದ ಭಾಷೆಯ ಸೊಗಡಿನ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಒಂದೇ ಕುಟುಂಬದಂತೆ ಅಜ್ಜಿ ರುಕ್ಮವ್ವ, ಫಕ್ಕಿರ ಕಾಂಬಳೆ, ಮಂಜುನಾಥ ಬುಚಡಿ, ಮಾರುತಿ ಬುಚಡಿ, ಮತ್ತು ಮತ್ತು ರಾಜು ಕಾಂಬಳೆ ಮಾಡಿದ ಟಿಕ್‍ಟಾಕ್ ವಿಡಿಯೋಗಳಿಗೆ ಸಾವಿರಾರು ಲೈಕ್ ಸಿಗುತ್ತಿರುತ್ತದೆ. ಆದ್ದರಿಂದ ಅಜ್ಜಿಯ ಜೊತೆ ಯುವಕರು ಟಿಕ್‍ಟಾಕ್ ಮಾಡಲು ಮುಗಿಬಿದಿದ್ದಾರೆ.
ಪಕ್ಕಿರ ಕಾಂಬಳೆ ಟಿಕ್‍ಟಾಕ್ ಖಾತೆಯಲ್ಲಿ 1 ಲಕ್ಷ 40 ಫಾಲೋವರ್ಸ್ ಇದ್ದರೆ, ಮಂಜುನಾಥ್ ಬುಚಡಿ ಅವರಿಗೆ 55 ಸಾವಿರ ಫಾಲೋವರ್ಸ್ ಇದ್ದಾರೆ. ಮಾರುತಿ ಬುಚಡಿ 40 ಸಾವಿರ ಫಾಲೋವರ್ಸ್ ಇದ್ದಾರೆ. ಅಜ್ಜಿ ರುಕ್ಮವ್ವ ಲೋಕರಿ, ರಾಜು ಕಾಂಬಳೆ ಇತರರು ಸೇರಿ ಹೆಚ್ಚಾಗಿ ಟಿಕ್‍ಟಾಕ್ ಮಾಡುತ್ತಿರುತ್ತಾರೆ. ಯುವಕರಿಗೆ ಅಜ್ಜಿ ಹೇಳಿವ ಪಂಚಿಂಗ್ ಡೈಲಾಗ್‍ನಿಂದ ಅವರು ಟಿಕ್‍ಟಾಕ್ ಸ್ಟಾರ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಜ್ಜಿ ಟಿಕ್‍ಟಾಕ್ ಹವಾ ಜೋರಾಗಿದೆ.