ಬೆಳಗಾವಿ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ವಿಚಾರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಯನ್ನು ಪುತ್ರ ಸಂತೋಷ್ ಜಾರಕಿಹೊಳಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯ ವಿಚಾರವಾಗಿ ನಾನೇನೂ ಕಮೆಂಟ್ ಮಾಡಲ್ಲ. ತಂದೆಯವರಿಗೆ ಅವರಿಗೆ ಸ್ವಲ್ಪ ಸಿಟ್ಟು ಜಾಸ್ತಿ. ಸದ್ಯಕ್ಕೆ ಒತ್ತಡ ಇರುವುದಕ್ಕೆ ಕೋಪದಲ್ಲಿ ಮಾತನಾಡುತ್ತಿದ್ದಾರೆ. ಅವರ ಸಿಟ್ಟು ಸರಿ ಹೋಗಿ ಶಾಂತ ಆಗುತ್ತದೆ. ಆವಾಗ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಯಾವ ರೀತಿ ತೀರ್ಮಾನ ಮಾಡುತ್ತಾರೆ ಕಾದು ನೋಡೋಣ. ನಮಗೆ ಲಖನ್ ಅವರು ಮೆನ್ ಸಪೋರ್ಟ್ ಇದ್ದಂತೆ ಇದ್ದರು. ಅವರು ನಮಗೆ ಒಳ್ಳೆಯದು ಬಯಸಿಕೊಂಡು ಬಂದಿದ್ದಾರೆ. ಬಾಲಚಂದ್ರ ಅವರು ವೈಯಕ್ತಿಕ ವಿಚಾರ ಸೇರಿ ಎಲ್ಲಾ ವಿಚಾರದಲ್ಲಿ ಒಳ್ಳೆಯ ಮಾರ್ಗದರ್ಶನ ಕೊಡುತ್ತಾರೆ ಎಂದು ತಿಳಿಸಿದ್ದಾರೆ.
ಅಂಬಿರಾವ್ ಪಾಟೀಲ್ ನೇತೃತ್ವದಲ್ಲಿ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ತೊಂದರೆಯಲ್ಲಿತ್ತು. ಹಿಂದೆ ಕಬ್ಬಿನ ಬಿಲ್ ಗಳು ಹೆಚ್ಚು ಕಮ್ಮಿ ಆಗುತ್ತಿದ್ದವು. ರಾಜಕೀಯ ಒತ್ತಡ ಸೇರಿಸಿ ಕೆಲವು ತೊಂದರೆ ಕಾರ್ಖಾನೆಗೆ ಆಗುತ್ತಿತ್ತು. ಈಗ ನಾನೇ ಕಾರ್ಖಾನೆ ಎಂಡಿ ಆಗಿದ್ದು ಎಲ್ಲವೂ ಸರಿಯಾಗಿದೆ. ಅಂಬಿರಾವ್ ಮಾಡುತ್ತಿರುವುದು ಗೊತ್ತಾದ ಮೇಲೆ ಆತನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದೇನೆ ಎಂದರು.