ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್(40) (Jayashree Gurannavar) ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಶ್ರೀ ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Advertisement
Advertisement
ಇವರು ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಸಂಘಟನೆ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಕಬ್ಬಿನ ಬಾಕಿ ಬಿಲ್ ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದಿದ್ದರು.
Advertisement
Advertisement
ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ಮಾಡಿದ್ದ ಜಯಶ್ರೀ ಕುರಿತು ಕುಮಾರಸ್ವಾಮಿಯವರು ಹಗುರವಾಗಿ ಮಾತಾಡಿ ಟೀಕೆಗೆ ಒಳಗಾಗಿದ್ದರು. ಬಳಿಕ ರಾಜ್ಯಾದ್ಯಂತ ಸಂಚಾರ ಮಾಡಿ ಮಹಿಳೆಯರನ್ನ ರೈತ ಸಂಘಟನೆಯಲ್ಲಿ ಸೇರಿಸಿದ್ದರು. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು
ಸದ್ಯ ಜಯಶ್ರೀ ಅವರು ಓರ್ವ ಮಗನನ್ನ ಅಗಲಿದ್ದಾರೆ.