ಬೆಳಗಾವಿ: ನಾಡದ್ರೋಹಿ ಎಂಇಎಸ್‌ಗೆ (MES) ಬೆಳಗಾವಿ ಪಾಲಿಕೆ ಆಯುಕ್ತರು ಶಾಕ್ ಕೊಟ್ಟಿದ್ದಾರೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ‘ಬೆಳಗಾವಿ’ ಎಂಬ ಪದವನ್ನೇ ಬಳಸಬೇಕು ಎಂದು ಸೂಚನೆ ನೀಡಿದೆ.
ಬೆಳಗಾವಿ (Belagavi) ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ ಆದೇಶ ಹೊರಡಿಸಿದ್ದಾರೆ. ಬೆಳಗಾಂವ, ಬೆಳಗಾಮ್ ಅಂತಾ ಬರೆದಿರೋ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ 92 ವಯಸ್ಸಾಯ್ತು.. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಹೆಚ್‌ಡಿಡಿ
Advertisement
Advertisement
‘ಬೆಳಗಾವಿ’ ಅಂತಾ ಬಳಸಲು ಹಿಂದೇಟು ಹಾಕುತ್ತಾ ಬಂದಿದ್ದ ನಾಡದ್ರೋಹಿಗಳಿಗೆ ಇದರಿಂದ ಶಾಕ್ ಆಗಿದೆ. ಸರ್ಕಾರದ ಆದೇಶವನ್ನ ಕಟ್ಟುನಿಟ್ಟಾಗಿ ಪಾಲಿಸಲು 2 ಸಾವಿರ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ.
Advertisement
ಆದೇಶ ಪಾಲಿಸದವರ ಅಂಗಡಿ ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ ಮಹಾನಗರದಲ್ಲಿ ಅನೇಕ ವರ್ಷಗಳಿಂದ ಕನ್ನಡ ಹೋರಾಟಗಾರ ಒತ್ತಾಯವಿತ್ತು. ಸರ್ಕಾರದ ಆದೇಶದಂತೆ ಶೇ.60 ರಷ್ಟು ನಾಮಫಲಕದಲ್ಲಿ ಕನ್ನಡ ಬರೆಸಬೇಕು ಎಂದಿದೆ. ಇದನ್ನೂ ಓದಿ: ಮೆಕ್ಕೆಜೋಳದಲ್ಲಿ ಅರಳಿದ ರಾಮಮಂದಿರ – ಭಗವಾನ್ ರಾಮನ ದರ್ಶನಕ್ಕೆ ಬನ್ನಿ..
Advertisement
ಬೆಳಗಾAವ, ಬೆಳಗಾಮ್ ಬದಲಾಗಿ ಬೆಳಗಾವಿ ಬಳಸುವಂತೆ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಈಗ ಸರ್ಕಾರದ ಆದೇಶ ಹಾಗೂ ಕನ್ನಡಿಗರ ಬೇಡಿಕೆ ಅನುಷ್ಠಾನಕ್ಕೆ ಪಾಲಿಕೆ ಆಯಕ್ತರೇ ಫೀಲ್ಡಿಗಿಳಿದು ಕ್ರಮಕೈಗೊಂಡಿದ್ದಾರೆ.