ಮುಂಬೈ/ ಬೆಳಗಾವಿ: ಗಡಿ ವಿವಾದದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮಹಾರಾಷ್ಟ್ರ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್(Prithviraj Chauhan) ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರ(Maharashtra) ವಿರುದ್ಧದ ಖಂಡನಾ ನಿರ್ಣಯಕ್ಕೆ ಸಿದ್ದರಾಮಯ್ಯ ಹೇಗೆ ಬೆಂಬಲ ನೀಡಿದರು. ನಾವೆಲ್ಲಾ ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇವೆ. ಸುಪ್ರೀಂಕೋರ್ಟ್ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು. ಹೀಗಿರುವಾಗ ನಿರ್ಣಯ ಕೈಗೊಳ್ಳುವ ಪ್ರಶ್ನೆ ಯಾಕೆ ಬರುತ್ತದೆ. ಮೊದಲಿಗೆ ಕರ್ನಾಟಕ ಸರ್ಕಾರವೇ ಪ್ರಚೋದನೆ ಮಾಡಿದ್ದು ಎಂದು ಪೃಥ್ವಿರಾಜ್ ಚವಾಣ್ ಟೀಕಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಸೇರಿ 865 ಹಳ್ಳಿಗಳು ನಮಗೆ ಸೇರಬೇಕು – ಮಹಾರಾಷ್ಟ್ರ ಅಸೆಂಬ್ಲಿ ಸರ್ವಾನುಮತದ ನಿರ್ಣಯ
Advertisement
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಮಹಾಜನ್ ವರದಿಯೇ ಅಂತಿಮ. ನಮಗೆ ಸೇರಬೇಕು ಎಂದು ನಿರ್ಣಯ ಮಾಡಿದರೂ ಕಾನೂನು ಬಲ ಇಲ್ಲ. ನಾವು ನಮ್ಮ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಮಹಾರಾಷ್ಟ್ರ ವಿಧಾನಸಭೆ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರು ಪ್ರಚೋದನೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
Advertisement
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಪ್ರತಿಕ್ರಿಯಿಸಿ, ಮಹಾರಾಷ್ಟ್ರದ ನಿರ್ಣಯವನ್ನು ಕರ್ನಾಟಕ, ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಒಂದು ಹಳ್ಳಿಯನ್ನು ನಾವು ಬಿಟ್ಟು ಕೊಡುವುದಿಲ್ಲ. ಅವರ ಹಳ್ಳಿಯೂ ನಮಗೆ ಬೇಡ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಇದೆ. ಚುನಾವಣೆ ಹತ್ತಿರ ಬಂದಿದ್ದು, ಆ ಭಾಗದಲ್ಲಿ ರಾಜಕೀಯವಾಗಿ ಸ್ವಲ್ಪ ವ್ಯತ್ಯಾಸ ಆಗಿದೆ. ಹಾಗಾಗಿ ಬಿಜೆಪಿಗರೇ ಕುಮ್ಮಕ್ಕು ಕೊಟ್ಟು ಹೀಗೆ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದ್ದಾರೆ.